ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳ: ಶಾಸಕ ಹರತಾಳು ಹಾಲಪ್ಪ

0
695

ರಿಪ್ಪನ್‌ಪೇಟೆ: ಮುಂದಿನ ದಿನಗಳಲ್ಲಿ ಜನ ಸೇರಿಸುವುದು ಕಷ್ಟಕರವಾಗಿದೆ ಕೊರೊನಾದಿಂದಾಗಿ ಜನ ಪಾಠ ಕಲಿತ್ತಿದ್ದಾರೆ ಅಲ್ಲದೆ ಕಾಲ ಬದಲಾದಂತೆ ನಾವುಗಳು ಬದಲಾಗಬೇಕು ಕುಳಿತ ಸ್ಥಳದಿಂದಲೇ ಸಭೆಗಳನ್ನು ನಡೆಸುವ ಯಾಂತ್ರಿಕ ಯುಗದಲ್ಲಿ ನಾವುಗಳು ಇದ್ದು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಜನರು ತಮ್ಮ ಕಾರ್ಯ ಚಟುವಟಿಕೆಯ ಒತ್ತಡದ ಬದುಕಿನಲ್ಲಿದ್ದಾರೆ ಆ ಕಾರಣ ಜನ ಸೇರಿಸುವುದು ಕಷ್ಟವಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಬಿಜೆಪಿ ಬೂತ್ ಅಧ್ಯಕ್ಷರಿಗೆ ನಾಮಫಲಕ ಹಸ್ತಾಂತರ ಕಾರ್ಯಕ್ರಮದಲ್ಲಿ ಬೆನವಳ್ಳಿ, ಅರಸಾಳು, ತಮ್ಮಡಿಕೊಪ್ಪ, ಬಸವಾಪುರ, ಹಾರೋಹಿತ್ತಲು, ಬರುವೆ, ಗವಟೂರು, ಕೆರೆಹಳ್ಳಿ, ಹಾರಂಬಳ್ಳಿ, ಬೆಳ್ಳೂರು, ದೋಬೈಲು, ಗುಬ್ಬಿಗಾ ಗ್ರಾಮಗಳ ಬಿಜೆಪಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಪಕ್ಷ ಸದೃಢವಾಗಿದ್ದು ಅಭಿವೃದ್ದಿ ಕಾರ್ಯದಲ್ಲಿ ಈ ಹಿಂದಿನ ಸರ್ಕಾರಗಳು ಮಾಡಲಾಗದಷ್ಟು ಅಭಿವೃದ್ದಿಯನ್ನು ಕೇವಲ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಮಾಡಿದೆ. ಎಲ್ಲ ಸಮುದಾಯದ ಅಭಿವೃದ್ದಿಗೆ ಹೆಚ್ಚು ಅನುದಾನವನ್ನು ನೀಡಲಾಗಿದೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ನಾನು ಸೇರಿದಂತೆ ವೀರಶೈವ ಈಡಿಗಾ ಬ್ರಾಹ್ಮಣ ಪೂಜಾರಿ ನಾಡವ ಸವಿತಾ ಸಮಾಜ ಹೀಗೆ ಹಲವು ಜನಾಂಗದವರ ಸಭಾಭವನಕ್ಕೆ ಹಾಗೂ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಕ್ಕೆ ಮತ್ತು ಸುಸಜ್ಜಿತ ರಸ್ತೆ ಅಭಿವೃದ್ದಿಗೆ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದರೂ ಕೂಡಾ ನಮ್ಮ ಪಕ್ಷದ ಕಾರ್ಯಕರ್ತರು ತಾವುಗಳು ಸಭೆ ಸಮಾರಂಭಗಳಲ್ಲಿ ಸೇರಿಕೊಂಡ ಸಂದರ್ಭದಲ್ಲಿ ಚರ್ಚಿಸುವ ಕಾರ್ಯ ಮಾಡಬೇಕು ಎಂದರು.

ಈ ಹಿಂದೆ ಎರಡು ಅವಧಿಯಲ್ಲಿ ಕ್ಷೇತ್ರದ ಶಾಸಕರಾಗಿದ್ದಾಗ ಏನು ಮಾಡಿದ್ದರೂ ಈಗಿನ ಶಾಸಕರು ಏನು ಮಾಡುತ್ತಿದ್ದಾರೆಂಬ ಬಗ್ಗೆ ಕಾರ್ಯಕರ್ತರು ಚರ್ಚೆ ನಡೆಸಿ ವಿರೋಧಿಗಳಿಗೆ ಬಾಯಿ ಮುಚ್ಚಿಸುವ ಕೆಲಸ ಮಾಡಿ ಕೆಲವರು ಅಲ್ಲಿಇಲ್ಲಿ ಕುಳಿತು ಶಾಸಕರ ಮತ್ತು ಸಂಸದರ ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವರಿಗೆ ಅಂಕಿ ಅಂಶಗಳನ್ನು ಇಟ್ಟುಕೊಂಡು ಮುಖಕ್ಕೆ ಹಿಡಿಯುವ ಕಾರ್ಯ ಮಾಡಿ ಎಂದು ವಿರೋದ ಪಕ್ಷದವರನ್ನು ಲೇವಡಿ ಮಾಡಿದರು.

ಬೂತ್ ಅಧ್ಯಕ್ಷರಾದ ಎಂ.ಕೆ.ನಾಗಭೂಷಣ, ಬಿ.ಎಸ್.ಸುಬ್ರಹ್ಮಣ್ಯ ಅರಸಾಳು, ಗುಂಡೋಜಿ ತಮ್ಮಡಿಕೊಪ್ಪ, ಕೊಳವಂಕ ನಾರಾಯಣಪ್ಪ, ವಿಶ್ವನಾಥ, ಈರಪ್ಪಶೇಟ್, ಕಳಸೆ ರಾಜಕುಮಾರ್, ಗಾಜಿನಗೋಡು ನಾಗರಾಜ್, ಗೋಪಾಲ ಶಬರೀಶ್‌ನಗರ, ರಾಮಚಂದ್ರ, ರಾಘವೇಂದ್ರ, ವಿಷ್ಣುಮೂರ್ತಿ, ಈಶ್ವರರಾವ್, ಸುಧೀರ್ ರವರಿಗೆ ಶಾಸಕ ಹರತಾಳು ಹಾಲಪ್ಪ ನಾಮಫಲಕವನ್ನು ಹಸ್ತಾಂತರಿಸಿ ಮನೆಗೆ ಅಳವಡಿಸಿದರು.

ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬೆಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಬಿಜೆಪಿ ಮುಖಂಡ ಆರ್.ಟಿ.ಗೋಪಾಲ್, ಎಂ.ಸುರೇಶ್‌ಸಿಂಗ್, ದೇವೇಂದ್ರಪ್ಪಗೌಡ ನೆವಟೂರು, ಎನ್.ಸತೀಶ್, ಕೆ.ಬಿ.ಹೂವಪ್ಪ, ಮೆಣಸೆ ಆನಂದ, ಕೃಷ್ಣೋಜಿರಾವ್, ಸುಂದರೇಶ್, ಸುಧೀಂದ್ರ ಪೂಜಾರಿ ಪಕ್ಷದ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here