ರಿಪ್ಪನ್ಪೇಟೆ: ಸರ್ಕಾರಿ ಬಸ್ ಸೌಲಭ್ಯದ ಬಹು ವರ್ಷಗಳ ಬೇಡಿಕೆಯಾಗಿದ್ದು ಈಡೇರಿಸುವಲ್ಲಿ ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರದ ಶಾಸಕರು ಯಶಸ್ವಿಯಾಗಿದ್ದಾರೆಂದು ಬೆಳ್ಳೂರು ಗ್ರಾಮಸ್ಥರು ಮತ್ತು ವಿದ್ಯಾರ್ಥಿ ಸಮೂಹ ಅಭಿನಂದಿಸಿದೆ.
ಶರಾವತಿ, ಚಕ್ರಾ, ವರಾಹಿ, ಮಾಣಿ, ಮಡೆನೂರು ಡ್ಯಾಂ ನಿರ್ಮಾಣಕ್ಕಾಗಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಮುಳುಗಡೆ ಸಂತ್ರಸ್ತ ಕುಟುಂಬದವರೇ ಹೆಚ್ಚು ವಾಸಿಸುತ್ತಿರುವ ಕುಗ್ರಾಮಗಳಾದ ಬೆಳ್ಳೂರು, ಬುಕ್ಕಿವರೆ, ಚಾಣಬೈಲು, ದೋಬೈಲು, ಮಸ್ಕಾನಿ, ಕಳಸೆ, ಹಾರೋಹಿತ್ತಲು, ಬಸವಾಪುರ, ಕಲ್ಲುಹಳ್ಳ, ಗುಳಿಗುಳಿ ಶಂಕರ, ಗುಬ್ಬಿಗಾ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಮತ್ತು ಶಾಲಾ – ಕಾಲೇಜ್ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರು ವೃದ್ಧರು ಗರ್ಭಿಣಿಯರು ಸೇರಿದಂತೆ ಇನ್ನಿತರ ಹಲವರು ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿತು.
ಈ ಬಗ್ಗೆ ಸಾಕಷ್ಟು ಭಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾದರೂ ಪ್ರಯೋಜನವಾಗಿರಲ್ಲಿಲ್ಲ ಇತ್ತೀಚೆಗೆ ಬೆಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಯವರಿಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿ ಪೋಷಕ ವರ್ಗ ಮನವಿ ಮಾಡಿಕೊಂಡ ಮೇರೆಗೆ ತಕ್ಷಣ ಸ್ಪಂದಿಸಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿದ್ದಾರೆಂದು ಅಭಿನಂದಿಸಿದ್ದಾರೆ.
ನೂತನ ಬಸ್ ವೇಳಾಪಟ್ಟಿ :