ತೀರ್ಥಹಳ್ಳಿ: ತಾಲೂಕಿನ ಅಗ್ರಹಾರ ಹೋಬಳಿ ಹಾದಿಗಲ್ಲು ಗ್ರಾಮದಲ್ಲಿ ಜಮೀನೊಂದರ ಸಮೀಪದ ದರಗು (ಒಣಗೆಲೆ) ಗುಡಿಸುವ ಪ್ರದೇಶದಲ್ಲಿನ ಮರದ ಮೇಲೆ ಕಂಡುಬಂದ ಬೃಹದಾಕಾರದ ಕಾಳಿಂಗ ಸರ್ಪವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಸಂರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.

ವೆಂಕಟೇಶ್ ಎಂಬುವರ ಜಮೀನಿನಲ್ಲಿ ಸರ್ಪ ಕಾಣಿಸಿಕೊಂಡಿತ್ತು. ಈ ಕುರಿತಂತೆ ಅರಣ್ಯ ಇಲಾಖೆ ಹಾಗೂ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಕಿರಣ್, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಮರದ ಮೇಲಿದ್ದ ಸರ್ಪವನನ್ನು ಸಂರಕ್ಷಿಸಿದ್ದಾರೆ.
