ಬೆದರಿಸಿ ಮೋಸ ಮಾಡಿ ಆಸ್ತಿ ಕಬಳಿಕೆ ಆರೋಪ ; ಮಾನಸಿಕ ಅಸ್ವಸ್ಥ ಮಗನೊಂದಿಗೆ ಬೀದಿ ಪಾಲಾದ ವೃದ್ಧೆ !

0
766

ಹೊಸನಗರ: ನಾಗರಾಜ ಗೌಡ ಎಂಬುವವರು ನಮ್ಮ ವಾಸದ ಮನೆಯ ಜಾಗವನ್ನು ಮೋಸ ಮಾಡಿ ಖರೀದಿಸಿ ಪೂರ್ತಿ ಹಣ ನೀಡದೆ ಮೋಸ ಮಾಡಿದ್ದಾರೆಂದು ಪುಣಜೆ ಗ್ರಾಮದ ಬ್ರಹ್ಮೇಶ್ವರ ವಾಸಿ ಶಾರದಮ್ಮ ಕೋಂ ಡಾಕಪ್ಪಗೌಡ (60) ಇವರು ಆರೋಪಿಸಿ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ಘಟನಾ ವಿವರ:

ನಾವು ಸುಮಾರು 40 ವರ್ಷದಿಂದ ಬ್ರಹ್ಮೇಶ್ವರದ ಸರ್ಕಾರಿ ಶಾಲೆಯ ಮುಂಭಾಗದ 40X100 ರ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದು ನನ್ನ ಗಂಡ 30 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ನಮಗೆ 2 ಜನ ಗಂಡು ಮಕ್ಕಳಿದ್ದು, ಮೊದಲನೇಯವನು ವೀರಪ್ಪ ಯಾನೆ ಮಾಣಿ ಈತನು ಈಗ್ಗೆ 4 ವರ್ಷಗಳಿಂದ ಹಿಂದೆ ಮೃತಪಟ್ಟಿರುತ್ತಾನೆ. 2ನೇ ಯವನು ಜಗದೀಶ ಇವನು ನನ್ನೊಂದಿಗೆ ವಾಸವಾಗಿದ್ದು, ಅವನಿಗೆ 40 ವರ್ಷ ಆತನು ಸಹ ಈಗ್ಗೆ 2 ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾನೆ.ನಾವು ವಾಸವಾಗಿದ್ದ ಬ್ರಹ್ಮೇಶ್ವರದ ಮನೆಯನ್ನು ನಮ್ಮ ಮನೆಯ ಪಕ್ಕದಮನೆ ವಾಸಿಯಾದ ನಾಗರಾಜ ಗೌಡ ರವರು 2021 ರಲ್ಲಿ ನಮ್ಮ ಮನೆ ಹಾಗೂ ಜಾಗವನ್ನು ನಾವು ಕೊಡುವುದಿಲ್ಲ ಈ ಮನೆಯನ್ನು ಬಿಟ್ಟರೇ ನಮಗೆ ಯಾವುದೇ ಮನೆ ಹಾಗೂ ಆಸ್ತಿ ಪಾಸ್ತಿ ಇರುವುದಿಲ್ಲ ಎಂದು ಹೇಳಿದರೂ ಸಹ ಬಿಟ್ಟುಬಿಡದೇ ಕಾಡಿಸಿ ಹಾಗೂ ನಮ್ಮ ಸಂಬಂಧಿಕರನ್ನು ಕರೆಯಿಸಿ ಅವರ ಸಮಾಕ್ಷಮದಲ್ಲಿ ಅವರನ್ನು ವಿಚಾರಿಸಿ ತಿಳಿಸುತ್ತೇನೆ ಎಂದು ಹೇಳಿದರೂ ಸಹ ಕೇಳದೇ ನಮ್ಮ ಮನೆ ಹಾಗೂ ಜಾಗವನ್ನು 4,50,000 ರೂ. ಗಳನ್ನು ನೀಡುವುದಾಗಿ ಸದರಿ ಮನೆ ಹಾಗೂ ಜಾಗವನ್ನು ಬಲತ್ಕಾರದಿಂದ ಖರೀದಿ ಮಾಡಿ ಪೂರ್ತಿ ಹಣವನ್ನು ಸಂದಾಯ ಮಾಡದೆ ಆಗಾಗೇ 5-10 ಸಾವಿರ ರೂ. ನೀಡಿರುತ್ತಾರೆ. ಅವರು ನೀಡಿದ ಒಟ್ಟು ಹಣದ ಬಾಬು 1,73,500 ರೂ. ಗಳಾಗಿದ್ದು ಇನ್ನು 2,76,500 ರೂ.ಗಳು ಬಾಕಿ ಇರುತ್ತದೆ.

ನಾವು ಹಾಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಬಾಡಿಗೆ ಹಣವನ್ನು ನಾನು ಕೂಲಿ ಮಾಡಿದ ಹಣದಲ್ಲಿ ಕಟ್ಟುತ್ತಿರುತ್ತೇನೆ ಹಾಗೂ ನನ್ನ ಮಗ ಜಗದೀಶ ಮಾನಸಿಕ ಅಸ್ವಸ್ಥನಾಗಿರುವುದರಿಂದ ಅವನ ಚಿಕಿತ್ಸೆ ವೆಚ್ಚವನ್ನು ಸಹ ಕೂಲಿ ಹಣದಿಂದಲೇ ಭರಿಸುತ್ತಿದ್ದು, ನನಗೆ ವಯಸ್ಸಾಗಿದ್ದರಿಂದ ಹಾಗೂ ಆರೋಗ್ಯ ಸರಿಯಿಲ್ಲದೇ ಇರುವುದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗಿದ್ದು ಸದರಿ ಮೇಲ್ಕಂಡ ವೆಚ್ಚವನ್ನು ಭರಿಸಲು ನನಗೆ ಕಷ್ಟವಾಗಿದ್ದು, ನನ್ನ ಸಂಬಂಧಿಕರು ಹಾಗೂ ಹಿತೈಷಿಗಳಿಗೆ ವಿಚಾರ ತಿಳಿಸಿದ್ದು, ಅವರು ನಮಗೆ ಅಲ್ಪ ಸ್ವಲ್ಪ ಸಹ ಮಾಡುತ್ತಿದ್ದು, ಇನ್ನು ಮುಂದೆ ನನಗೆ ದುಡಿಯುವ ಶಕ್ತಿಯನ್ನು ಕಳೆದುಕೊಂಡಿರುತ್ತೇನೆ ಹಾಗೂ ನನ್ನ ಮಗನ ಆರೋಗ್ಯವು ಸಹ ಸರಿ ಇಲ್ಲದಿರುವುದರಿಂದ ನಮಗೆ ಬಾಡಿಗೆ ಮನೆಯ ಹಣವನ್ನು ಸಹ ಕಟ್ಟಲು ಆಗಾದೇ ಇದ್ದರಿಂದ ನಮ್ಮ ಮನೆ ಹಾಗೂ ನಮ್ಮ ಮನೆಯ ಜಾಗವನ್ನು ನಾಗರಾಜಗೌಡ ಮೋಸದಿಂದ ಖರೀದಿ ಮಾಡಿ ಪೂರ್ತಿ ಹಣವನ್ನು ಸಂದಾಯ ಮಾಡದೇ ನಮಗೆ ಮೋಸ ಮಾಡಿದ್ದು, ನಮ್ಮ ಸಂಬಂಧಿಕರು ನಮಗೆ ತಿಳಿಸಿ ಬುದ್ದಿವಾದ ಹೇಳಿ, ನೀವು ತೆಗೆದುಕೊಂಡ ಹಣವನ್ನು ನಾವೆಲ್ಲ ಸೇರಿ ಒಟ್ಟುಗೂಡಿಸಿಕೊಡುತ್ತೇವೆ ಆ ಹಣವನ್ನು ನೀವು ಅವರಿಗೆ ನೀಡಿ ನಿಮ್ಮ ಮನೆ ಮತ್ತು ಜಾಗವನ್ನು ವಾಪಾಸ್ಸು ತೆಗೆದುಕೊಳ್ಳಿ ಎಂದು ಹೇಳಿದ ಮೇರೆಗೆ ನಾವು ನೀಡಬೇಕಾದ 1,73,500 ರೂ. ಹಣವನ್ನು ನಾವು ವಾಪಾಸ್ಸು ಅವರಿಗೆ ನೀಡುತ್ತೇವೆ. ಸದರಿ ನಮ್ಮ ವಾಸದ ಮನೆ ಹಾಗೂ ಜಾಗವನ್ನು ನಮಗೆ ವಾಪಾಸ್ಸು ಕೊಡಿಸಿಕೊಡುವಂತೆ ಸಂತ್ರಸ್ತೆ ಶಾರದಮ್ಮ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here