ಬೆನವಳ್ಳಿಯಲ್ಲಿ ಸಹಾಯ ಧನದ ಚೆಕ್ ವಿತರಣೆ

0
284

ಹೊಸನಗರ: ತಾಲ್ಲೂಕಿನ ಬೆನವಳ್ಳಿ ಗ್ರಾಮದ ಬೈರಾಪುರ ಎಂಬಲ್ಲಿ ಲೀಲಾವತಿ ಹೊಳೆಯಪ್ಪ ಗೌಡರವರಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಒಂದು ವರ್ಷದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 2 ಲಕ್ಷ ರೂ.ಗಿಂತ ಅಧಿಕ ಹಣವನ್ನು ಖರ್ಚು ಮಾಡಿರುತ್ತಾರೆ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಹೆಚ್ಚು ಹಣ ಖರ್ಚಾಗುವ ಬಗ್ಗೆ ವೈದ್ಯರು ತಿಳಿಸಿದ್ದು ಇದನ್ನು ಮನಗಂಡ ಸಂಘದ ಸದಸ್ಯರು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೋರೆ ಹೋಗಿದ್ದು ಯೋಜನೆಯ ಮನವಿಯನ್ನು ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗಡೆಯವರು 20ಸಾವಿರದ ಹಣ ಮಂಜೂರಾತಿ ಮಾಡಿದ್ದು ಮಂಜೂರಾತಿಯ ಚೆಕ್‌ನ್ನು ಚಿತ್ರದುರ್ಗ ಮತ್ತು ರಿಪ್ಪನ್‌ಪೇಟೆ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಹಾಗೂ ಶಿವಮೊಗ್ಗ ಜಿಲ್ಲೆಯ ನೂತನ ಹಿರಿಯ ನಿರ್ದೆಶಕರಾದ ಚಂದ್ರಶೇಖರ್ ಜೆ,ರವರು ಅನಾರೋಗ್ಯ ಪೀಡಿತ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಹರೀಶ್ ಕುಮಾರ್, ರಿಪನ್‌ಪೇಟೆಯ ಸ್ಥಳೀಯ ಗ್ರಾಮಸ್ಥರಾದ ಶ್ರೀಧರ್ ಹಾಗೂ ಸ್ಥಳೀಯ ಪ್ರತಿನಿಧಿ ರಾಜೇಶ್ವರಿಯವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here