24.3 C
Shimoga
Friday, December 9, 2022

ಬೆಳಂಬೆಳಗ್ಗೆ ಶಂಕಿತ ಉಗ್ರ ಶಾರಿಕ್ ಮನೆ ಮೇಲೆ ಪೊಲೀಸರ ದಾಳಿ !

ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಶಾರಿಕ್ ಮನೆ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದಾರೆ.

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಶಾರಿಕ್ ಆರೋಪಿಯಾಗಿರಬಹುದು ಎಂಬ ಕಾರಣಕ್ಕಾಗಿ ಒಟ್ಟು ಮೂರು ತಂಡಗಳಾಗಿ ಪೊಲೀಸರು ದಾಳಿ ನಡೆಸಿದ್ದಾರೆ.

ತೀರ್ಥಹಳ್ಳಿ, ಮಾಳೂರು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ.

ಶಾರಿಕ್ ಚಿಕ್ಕಮ್ಮನ ಮನೆ ಸೇರಿದಂತೆ ಸಂಬಂಧಿಕರ
ಒಟ್ಟು ನಾಲ್ಕು ಮನೆಗಳ ಮೇಲೆ ಪೊಲೀಸರು ರೈಡ್ ಮಾಡಿದ್ದಾರೆ. ಹಲವು ದಾಖಲೆಗಳನ್ನು ತೀರ್ಥಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ : ಅಕ್ಷಯ್ ಕುಮಾರ್

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!