ಬೆಳಂಬೆಳಗ್ಗೆ ACB ಅಧಿಕಾರಿಗಳು ದಾಳಿ

0
401

ಚಿಕ್ಕಮಗಳೂರು: ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ಅಜ್ಜಂಪುರದ ಪಟ್ಟಣ ಪಂಚಾಯತ್ ನಲ್ಲಿ ಎಸ್.ಡಿ.ಎ. ಆಗಿರುವ ತಿಮ್ಮಯ್ಯ ನಿವಾಸದ ಮೇಲೆ ದಾಳಿ ನಡೆದಿದೆ.

ಡಿವೈಎಸ್ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ತಿಮ್ಮಯ್ಯರ ನಿವಾಸ ಸೇರಿದಂತೆ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

ಕಡೂರು ಪಟ್ಟಣದ ತಿಮ್ಮಯ್ಯ ನಿವಾಸ, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಅಜ್ಜಂಪುರ ಪಟ್ಟಣ ಪಂಚಾಯತ್ ಕಚೇರಿ ಮತ್ತು ತಿಮ್ಮಯ್ಯಯ ತಂದೆಯ ಬಸೂರು ನಿವಾಸದ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಎಸ್.ಡಿ.ಎ. ಆಗಿರುವ ತಿಮ್ಮಯ್ಯ ಆದಾಯಕ್ಕಿಂತ 80 ಲಕ್ಷ ರೂ.ಗೂ ಅಧಿಕ ಹಣ ಗಳಿಸಿರುವ ಆರೋಪ ಎದುರಿಸುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here