ರಿಪ್ಪನ್ಪೇಟೆ: ಸಮೀಪದ ಕೆರೆಹಳ್ಳಿ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬುಕ್ಕಿವರೆ ರಾಜೇಶ್ ಒಪ್ಪದದಂತೆ ಇಂದು ಬೆಳಗ್ಗೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಅಭಿವೃದ್ದಿ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದರು.
ಮೊದಲ ಅವಧಿಯ 14 ತಿಂಗಳು ಅಧ್ಯಕ್ಷ ಉಪಾಧ್ಯಕ್ಷರಾಗಿ ಇನ್ನೂ ಎರಡನೇ ಹಂತದಲ್ಲಿ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು ಅದರಂತೆ ನಾನು ಇಂದು ಶಾಸಕ ಹರತಾಳು ಹಾಲಪ್ಪನವರ ಅಣತಿಯಂತೆ ನನ್ನ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
Related