ಬೇಲಿ ಕಟ್ಟಲು ಹೋದ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ!

0
1548

ತೀರ್ಥಹಳ್ಳಿ: ಬೇಲಿ ಕಟ್ಟಲು ಹೋದ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಲ್ಲೂಕಿನ ಕೆಂದಾಳಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಬಳದಲ್ಲಿ ದಿ. ವೆಂಕಪ್ಪನಾಯ್ಕ ಇವರ ಎರಡನೇ ಮಗ ಪ್ರಕಾಶ್ ಎನ್.ವಿ (39) ಇವರು ಶನಿವಾರ ಮಧ್ಯಾಹ್ನ ಸ್ಥಳೀಯರೊಬ್ಬರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಬೇಲಿ ಕಟ್ಟಲು ಹೋದವರು ಸಂಜೆಯಾದರೂ ಮನೆಗೆ ಹಿಂತಿರುಗಿ ಬಂದಿರುವುದಿಲ್ಲ.

ಸಂಜೆಯಾದರೂ ಮನೆಗೆ ಬಾರದಿದ್ದುದ್ದನ್ನು ಕಂಡು ಮನೆಯವರೆಲ್ಲ ಗಾಬರಿಗೊಂಡು ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದ್ದಾರೆ. ಆದರೆ ಅವರ ಇರುವಿಕೆ ಕಂಡು ಬಂದಿರುವುದಿಲ್ಲ ಇಂದು ಬೆಳಿಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ಅವರು ಕೆಲಸಕ್ಕೆ ಹೋದ ಸ್ಥಳದಲ್ಲಿಯೇ ಅಂದರೆ ಬೇಲಿ ಕಟ್ಟಲು ಹೋದ ಸ್ಥಳದಲ್ಲಿಯೇ ಶವವಾಗಿ ಕಂಡುಬಂದಿದ್ದಾರೆ.

ಮೃತರು ಪತ್ನಿ ಹಾಗೂ ಒಬ್ಬ 9 ವರ್ಷದ ಮಗ ಹಾಗೂ ಓರ್ವ ಸಹೋದರ ಹಾಗೂ ತಾಯಿಯನ್ನು ಅಗಲಿದ್ದಾರೆ.

ಈ ಘಟನೆ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here