ಬೇಸಿಗೆ ಶಿಬಿರ ನಡೆಸುವುದರಿಂದ ಮಕ್ಕಳ ಬುದ್ಧಿಶಕ್ತಿ ವೃದ್ಧಿ ಹಾಗೂ ಕೆಟ್ಟ ಹವ್ಯಾಸಗಳತ್ತ ಮನಸ್ಸು ಮಾಡುವುದಿಲ್ಲ: ಬಿ.ಜಿ ಚಂದ್ರಮೌಳಿ

0
368

ಹೊಸನಗರ: ರಜೆ ಸಂದರ್ಭದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್‌ನತ್ತ ಮುಖ ಮಾಡುತ್ತಿದ್ದು ಅದು ಬಿಟ್ಟರೆ ಬಿಸಿಲಿನಲ್ಲಿ ಕ್ರೀಡೆಯತ್ತ ಮುಖ ಮಾಡುತ್ತಿದ್ದು ಮಕ್ಕಳ ಮನಸ್ಸನ್ನು ಓಲೈಸಿಕೊಳ್ಳಬೇಕಾದರೆ ಶಾಲೆಗಳಲ್ಲಿ ಅಥವ ಸಂಘ-ಸಂಸ್ಥೆಯವರು ಮಕ್ಕಳಿಗಾಗಿ ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಗಾಸನ ಶಿಬಿರ, ಮನರಂಜನೆ ಕಾರ್ಯಕ್ರಮ ಹಾಗೂ ಮಕ್ಕಳ ಮನಸ್ಸಿಗೆ ಹಿಡಿಸುವಂತಹ ಶಿಬಿರಗಳನ್ನು ನಡೆಸುವುದು ಸೂಕ್ತ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಂಸ್ಥೆಯ ಅಧ್ಯಕ್ಷ ಚಂದ್ರಮೌಳಿಯವರು ಹೇಳಿದರು.

ತಾಲ್ಲೂಕಿನ ಕೋಡೂರಿನ ಬ್ಲಾಸಂ ಇಂಗ್ಲೀಷ್ ಮೀಡಿಯಂ ಸ್ಕೋಲ್‌ನಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದ್ದು ಶಿಬಿರ ಅತ್ಯಂತ ಯಶಸ್ವಿಯಾಗಿ 21ದಿನ ನಡೆದಿದ್ದು ಈ ಶಿಬಿರದಲ್ಲಿ ಯೋಗಾಸನ, ವಿವಿಧ ಕ್ರೀಡೆಗಳು, ವಿವಿಧ ಕಲೆಗಳು ಹಾಗೂ ಸಾಂಸ್ಕೃತೀಕ ಕಾರ್ಯಕ್ರಮಗಳ ಜೊತೆಗೆ ಇಂಗ್ಲೀಷ್ ಕಲಿಯುವಿಕೆ ಹಾಗೂ ಸ್ಪರ್ಧೆಗಳು ಏರ್ಪಡಿಸಲಾಗಿದ್ದು ಮುಕ್ತಾಯ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿ.ಎಸ್. ಸುರೇಶ್, ಪ್ರದೀಪ್, ನಟರಾಜ್, ಸಂತೋಷ್, ಪುಷ್ಪಾವತಿ, ಮಂಜಪ್ಪ, ಹಾಗೂ ಬಾಗಲಕೋಟೆಯ ಲಟಡರ್ ವಂಡರ್ ಸ್ಕೂಲಿನ ಮುಖ್ಯಸ್ಥರು ಅದಾ ವಸಂತಿ, ಪ್ರಕಾಶ್ ಹಾಗೂ ಶಾಲೆಯ ಶಿಕ್ಷಕ ವೃಂದ, ಪೋಷಕ ವರ್ಗ, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here