Home Accident ಬೈಕಿಗೆ ಡಿಕ್ಕಿ ಹೊಡೆದ ತರಕಾರಿ ಸಾಗಾಣಿಕೆ ವಾಹನ ; ಇಬ್ಬರು ಸ್ಥಳದಲ್ಲೇ ಸಾವು !
ಸೊರಬ: ತರಕಾರಿ ಸಾಗಾಣಿಕೆ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಿಕೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಶಿಕಾರಿಪುರ ತಾಲೂಕಿನ ಕರ್ನಲ್ಲಿ ಗ್ರಾಮದ ರುದ್ರಗೌಡ ಮಲ್ಲೇಶಗೌಡ (50) ಹಾಗೂ ಭರಮಗೌಡ ಚಂದ್ರಪ್ಪ (35) ಮೃತ ದುರ್ಧೈವಿಗಳು.

ಶಿರಾಳಕೊಪ್ಪ ಮಾರ್ಗವಾಗಿ ಸಾಗರದಡೆ ತೆರಳಿತ್ತಿದ್ದ ತರಕಾರಿ ಸಾಗಾಣಿಕೆ ವಾಹನ ಎದುರಿಗೆ ಬರದುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related