ಬೈಕ್ ಮತ್ತು ಓಮ್ನಿ ನಡುವೆ ಅಪಘಾತ ; ಕಟ್ಟೆಹಕ್ಕಲು ಶಾಲೆಯ ಮುಖ್ಯಶಿಕ್ಷಕ ಸಾವು !

0
1553

ತೀರ್ಥಹಳ್ಳಿ: ತಾಲ್ಲೂಕಿನ ಕಟ್ಟೆಹಕ್ಕಲು ಸಮೀಪ ನಾಗರವಳ್ಳಿ ಬಳಿ ಕೆಲಹೊತ್ತಿನ ಹಿಂದೆ ನಡೆದ ಭೀಕರ ಅಪಘಾತದಲ್ಲಿ ಕಟ್ಟೆಹಕ್ಕಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್ (51) ಎಂಬುವವರು ಸಾವನ್ನಪ್ಪಿದ್ದಾರೆ.

ಬೈಕಿನಲ್ಲಿ ಬರುತ್ತಿದ್ದಾಗ ತಿರುವಿನಲ್ಲಿ ಓಮ್ನಿ ಕಾರು ಗುದ್ದಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ವೆಂಕಟೇಶ್ ಸಾವನ್ನಪ್ಪಿದ್ದಾರೆ.

ಶಾಲೆಯ ಕೆಲಸದ ಸಲುವಾಗಿಯೇ ಎಲ್ಲಿಗೊ ಹೊರಟ್ಟಿದ್ದರು ಎನ್ನಲಾಗುತ್ತಿದ್ದು, ತಿರುವಿನಲ್ಲಿ ಸ್ಪೀಡ್ ಆಗಿದ್ದ ಒಮ್ನಿಗೆ ಬೈಕ್ ಡಿಕ್ಕಿಯಾಗಿದೆ.

ಇನ್ನೂ ಮೂಲತಃ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದವರಾದ ವೆಂಕಟೇಶ್ ಈ ವರ್ಷ ಪ್ರಮೋಶನ್ ಪಡೆದು ಮುಖ್ಯ ಶಿಕ್ಷಕರಾಗಿ ಕಟ್ಟೆಹಕ್ಕಲು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಸುತ್ತಮುತ್ತ ಉತ್ತಮ ಮೇಷ್ಟ್ರು ಎಂದು ಹೆಸರು ಮಾಡಿದ್ದ ಅವರ ನಿಧನಕ್ಕೆ ಸ್ಥಳೀಯರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here