ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಅರೆಬೆತ್ತಲಾಗಿ ಪ್ರತಿಭಟಿಸಿದ ಏಕಾಂಗಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ !!

0
667

ರಿಪ್ಪನ್‌ಪೇಟೆ: ಸರ್ಕಾರಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗಿಕರಣಗೊಳಿಸುವ ಸರ್ಕಾರದ ನಿಲುವನ್ನು ವಿರೋಧಿಸಿ ಇಂದು ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಏಕಾಂಗಿಯಾಗಿ ಅರೆಬೆತ್ತಲೆಯಲ್ಲಿ ರಿಪ್ಪನ್‌ಪೇಟೆ ಕೆನರಾಬ್ಯಾಂಕ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

`ಯುವಕರೆ ಏಳಿ ಎದ್ದೇಳಿ ಸಮಾಜ ರಕ್ಷಿಸಿ ಭಕ್ಷಕರನ್ನು ಶಿಕ್ಷಿಸಿ ಪ್ರಜಾಪ್ರತಿನಿಧಿಗಳ ಸರ್ಕಾರವೋ ? ಸರ್ವಾಧಿಕಾರಿಗಳ ಸರ್ಕಾರವೋ? ಎಂಬ ನಾಮಫಲಕವನ್ನು ಹಿಡಿದು ಏಕಾಂಗಿಯಾಗಿ ಅರೆಬೆತ್ತಲೆಯಲ್ಲಿ ಬ್ಯಾಂಕ್ ಕಛೇರಿಯ ಬಳಿ ಪ್ರತಿಭಟನೆ ನಡೆಸುವುದರೊಂದಿಗೆ ಸಾರ್ವಜನಿಕರ ಮತ್ತು ಬ್ಯಾಂಕ್ ಅಧಿಕಾರಿಗಳ ಗಮನಸೆಳೆದರು.

ಇನ್ನೂ ಇವರ ಪ್ರತಿಭಟನೆಯನ್ನು ಸಾರ್ವಜನಿಕರು ಗಮನಿಸುತ್ತಾ ತಮ್ಮಲ್ಲಿಯೇ ಗುನುಗುತ್ತಾ ಇದು ಹೋರಾಟಗಾರ ಕೃಷ್ಣಪ್ಪನವರಿಗೆ ಬೇಕಿತ್ತಾ ಎನ್ನುವವರು ಎದುರು ಹೇಳಲಾಗದೆ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದರೆ ಬ್ಯಾಂಕಿನವರು ಇಂತಹ ಹೋರಾಟಗಾರರ ಅಗತ್ಯವಿದೆ ಎನ್ನುವವರು ಬ್ಯಾಂಕ್ ಖಾಸಗಿಕರಣದಿಂದ ಸಾರ್ವಜನಿಕರು ಬ್ಯಾಂಕ್‌ ಬಗ್ಗೆ ನಂಬಿಕೆಯಿಲ್ಲದವರಂತೆ ಎಲ್ಲಿ ದಿವಾಳಿಯಾಗುವುದರೊಂದಿಗೆ ನಮ್ಮ ಕರ್ತವ್ಯಕ್ಕೆ ಕುತ್ತು ಬರುವುದೋ ಎಂಬ ಸಂಶಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ ಹೋರಾಟಗಾರ ಕೃಷ್ಣಪ್ಪನವರ ಏಕಾಂಗಿ ಅರೆಬೆತ್ತಲೆ ಪ್ರತಿಭಟನೆಗೆ ಸಾರ್ವಜನಿಕರಿಂದ ಪ್ರಶಂಸೆ ಕಾರಣವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here