ಬ್ಯಾಂಕ್ ಚೆಕ್ ಕಳವು ಮಾಡಿ ಒಂದೂವರೆ ಲಕ್ಷಕ್ಕೂ ಅಧಿಕ ರೂ. ವಂಚನೆ: ಕೆನರಾ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ನಾಲ್ವರ ವಿರುದ್ಧ ಕೇಸ್ ದಾಖಲು !

0
2263

ಚಿಕ್ಕಮಗಳೂರು : ಚೆಕ್ ಕಳವು ಮಾಡಿದ ನಂತರ ನಕಲಿ ಸಹಿ ಬಳಸಿ ಬ್ಯಾಂಕಿನಿಂದ ಸುಮಾರು 1 ಲಕ್ಷದ 60 ಸಾವಿರ ರೂಪಾಯಿ ವಂಚಿಸಿರುವ ಪ್ರಕರಣ ನಗರದ ಬಸವನಹಳ್ಳಿಯ ಕೆನರ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದು, ಈ ಸಂಬಂದ ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಬಸವನಹಳ್ಳಿ ಕೆನರಾ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಯೂಸುಫ್, ಶಕೀಲ್ ಅಹಮದ್ ಹಾಗೂ ಇಕ್ಬಾಲ್ ರವರು ಅತ್ತಿಗುಂಡಿ ಮಸೂದ್ ಅಹಮ್ಮದ್ ರವರ ಚೆಕ್ಕನ್ನು ಕಳವು ಮಾಡಿ ನಕಲಿ ಸಹಿ ಬಳಸಿಕೊಂಡು ಬ್ಯಾಂಕ್‌ನಿಂದ 1.60 ಲಕ್ಷ ರೂ ಗಳನ್ನು ಡ್ರಾ ಮಾಡಿ ವಂಚಿಸಿರುವುದು ಪತ್ತೆಯಾಗಿದೆ.

ವಂಚಕರು 2.50 ಲಕ್ಷ ರೂಪಾಯಿ ಮೊತ್ತದ ಇನ್ನೊಂದು ಚೆಕ್ಕನ್ನು ಆರೋಪಿಗಳು ಖಾಸಗಿ ಹಣಕಾಸು ಸಂಸ್ಥೆಗೆ ನೀಡಿದ್ದು, ಬ್ಯಾಂಕಿಗೆ ನಗದೀಕರಣ ಮಾಡಲು ಹೋದಾಗ ಖಾತೆಯಲ್ಲಿ ಹಣವಿಲ್ಲದೆ ತಿರಸ್ಕೃತಗೊಂಡಿದ್ದು ಚೆಕ್ ಬೌನ್ಸ್ ಅದರಿಂದ ಆ ಹಣಕಾಸು ಸಂಸ್ಥೆಯವರು ಚೆಕ್ ನ ಮಾಲಿಕ ಮಸೂದ್ ಅಹ್ಮದ್ ಗೆ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ನಿಂದ ಅಹ್ಮದ್ ಕೆನರಾ ಬ್ಯಾಂಕ್ ಬಸವನಳ್ಳಿ ಶಾಖೆಗೆ ಹೋಗಿ ಪರಿಶೀಲಿಸಿದಾಗ 1.60 ಲಕ್ಷ ರೂ. ಪಡೆದು ವಂಚಿಸಿರುವುದು ಪತ್ತೆಯಾಗಿದೆ. ಇದರಲ್ಲಿ ಬ್ಯಾಂಕ್‌ನವರು ಸಹ ಶಾಮೀಲಾಗಿದ್ದಾರೆ ಎಂಬ ಅನುಮಾನದಿಂದ ಮಸೂದ್ ಅಹ್ಮದ್ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here