ಬ್ಯಾಂಕ್ ವ್ಯವಸ್ಥಾಪಕರ ಕಮೀಷನ್ ಆಸೆ‌ ; ಗ್ರಾಹಕರ ಅಲೆದಾಟ !!

0
582

ರಿಪ್ಪನ್‌ಪೇಟೆ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಗ್ರಾಹಕರುಗಳು ತಾಲ್ಲೂಕಿನ ಕಾನೂನು ಸಲಹೆಗಾರರಿದ್ದರೂ ಕೂಡಾ ಕೆಲವು ಬ್ಯಾಂಕ್ ಮ್ಯಾನೇಜರ್‌ಗಳ ಕಮೀಷನ್ ಆಸೆಗಾಗಿ ತಮಗೆ ಬೇಕಾದ ಕಾನೂನು ಸಲಹೆಗಾರರಲ್ಲಿಗೆ ಹೋಗಿ ಎಂದು ಗ್ರಾಹಕರನ್ನು ಅಲೆದಾಡುವಂತೆ ಮಾಡುತ್ತಿದ್ದಾರೆಂದು ಬ್ಯಾಂಕ್ ಗ್ರಾಹಕರು ಆರೋಪಿಸಿದಾರೆ.

ಇಲ್ಲಿನ ಕೆನರಾಬ್ಯಾಂಕ್, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು, ಕಾರ್ಪೊರೇಷನ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಕಾರ್ಯನಿರ್ವಹಿಸುವ ಒಂದೊಂದು ಬ್ಯಾಂಕ್‌ನವರು ಒಂದೊಂದು ರೀತಿಯ ವರ್ತನೆಯನ್ನು ತೋರಿಸುತ್ತಿದ್ದಾರೆ. ಸಾಲ ಪಡೆಯಲು ಕೆಲವು ಬ್ಯಾಂಕ್ ಶಾಖೆಯಲ್ಲಿ ಕಮೀಷನ್ ಕೊಡಬೇಕು, ಕೆಲವು ಬ್ಯಾಂಕ್‌ಗಳಲ್ಲಿ ಸಿಬ್ಬಂದಿವರದ್ದೇ ಕಾರ್ಯಬಾರ, ಸಾಲ ಇರುವಂತಹವರಿಗೆ ಕೊಡಬೇಕು ಎಂದು ಸಿಬ್ಬಂದಿ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತಾರೆ.

ಕಾನೂನು ಸಲಹೆಗಾರರ ನೇಮಕ ಹೇಗೆಂದರೆ ಹಣವಿದ್ದವರು ಮತ್ತು ಪ್ರಭಾವವಿದ್ದವರು ಮಾತ್ರ ಬ್ಯಾಂಕಿನ ಸಲಹೆಗಾರರಾಗಿ ನೇಮಕವಾಗುವ ವ್ಯವಸ್ಥೆ ಇತ್ತಿಚೆಗೆ ನಡೆದು ಬಂದಿರುತ್ತದೆ ಎಂದು ಕೇಳಲ್ಪಟ್ಟಿದ್ದೇವೆ. ಕರ್ಣಾಟಕ ಬ್ಯಾಂಕ್‌ನಲ್ಲಿ ಜಾತಿಯೇ ಮುಖ್ಯ ಪಾತ್ರವಹಿಸುತ್ತದೆ. ಹೊಸನಗರದಲ್ಲಿ ಕರ್ನಾಟಕ ಬ್ಯಾಂಕ್‌ಗೆ ಎಷ್ಟೊ ವರ್ಷಗಳಿಂದ ಸ್ಥಳೀಯ ಕಾನೂನು ಸಲಹೆಗಾರರು ಇರಲಿಲ್ಲ ಮೊದಲು ಒಬ್ಬ ಬ್ರಾಹ್ಮಣ ನಂತರ ಒಬ್ಬ ಲಿಂಗಾಯತ ಸಂಪ್ರದಾಯಕ್ಕೆ ಸೇರಿದವರು ಕಾನೂನು ಸಲಹೆಗಾರರಾಗಿರುತ್ತಾರೆ.

ಕಾನೂನು ಸಲಹೆಗಾರನ್ನು ನೇಮಿಸಿಕೊಳ್ಳುವಾಗ್ಗೆ ಸದರಿಯವರ ಬಗ್ಗೆ ಅಂದರೆ ಯಾವುದೇ ಕೇಸ್ ವಗೈರೆ ಇಲ್ಲದವರೇ ಎಂಬುದನ್ನು ಪರಿಗಣಿಸುವುದಿಲ್ಲ.‌ ಬ್ಯಾಂಕ್‌ಗಳಲ್ಲಿ ಜನರಲ್ ಮ್ಯಾನೇಜರ್ ಮತ್ತು ಇನ್ನಿತರೆ ಉನ್ನತ ಹುದ್ದೆಯಲ್ಲಿರುವವರು ತಮ್ಮ ಜಾತಿಯವರಿಗೆ ಎಲ್.ಎಸ್.ಆರ್. ಮತ್ತು ಕೇಸುಗಳನ್ನು ಕೊಡಲು ಶಿಫಾರಸು ಮಾಡುವುದು ಇತ್ತೀಚೆಗೆ ತಿಳಿದು ಬರುತ್ತದೆ. ಜನರು ಸಹ ಮಾತನಾಡಲು ಪ್ರಾರಂಭಿಸಿರುತ್ತಾರೆ ಬ್ಯಾಂಕ್‌ಗಳಿಗೆ ಕಾನೂನು ಸಲಹಗಾರರನ್ನಾಗಿ ಸ್ಥಳೀಯ ವಕೀಲರನ್ನು ನೇಮಿಸಿಕೊಳ್ಳುತ್ತಾರೆ ಕೆನರಾಬ್ಯಾಂಕ್ ಅಲಗೇರಿಮಂಡ್ರಿ ಶಾಖೆಯಲ್ಲಿನ ದಾವೆಗಳನ್ನು ಮತ್ತು ಎಲ್.ಎಸ್.ಅರ್ ಗಳನ್ನು ಸ್ಥಳೀಯ ವಕೀರಲ್ಲದವರಿಗೆ ಮೂರ್ನಾಲ್ಕು ವರ್ಷಗಳಿಂದ ಕಳುಹಿಸುತ್ತಿದ್ದಾರೆ. ಅಲಗೇರಿಮಂಡ್ರಿ ಕೆನರಾಬ್ಯಾಂಕ್ ಶಾಖೆಗೆ ಸ್ಥಳೀಯ ವಕೀಲರಿಗೆ ಕಾನೂನು ಸಲಹೆ ಮತ್ತು ದಾವೆಗಳನ್ನು ನಡೆಸಲು ಬರುವುದಿಲ್ಲವೊ ?.

ರಿಪ್ಪನ್‌ಪೇಟೆ ಮತ್ತು ಚಿಕ್ಕಪೇಟೆ ನಗರ ಬ್ರಾಂಚ್‌ಗಳಲ್ಲಿ ಸಿಬ್ಬಂದಿ ಹೇಳಿದವರಿಗೆ ವ್ಯವಸ್ಥಾಪಕರು ಕೇಸ್ ಇತ್ಯಾದಿ ಕೆಲಸಗಳನ್ನು ಕಳುಹಿಸುತ್ತಿದ್ದಾರೆ ಇದರ ಅರ್ಥವೇನು‌ ?

ಎಸ್.ಬಿ.ಐ.ಮತ್ತು ಕಾರ್ಪೊರೇಷನ್ ಬ್ಯಾಂಕ್ ರಿಪ್ಪನ್‌ಪೇಟೆ ಎಸ್.ಬಿ.ಐ. ಹುಂಚದ ಹತ್ತಿರವಿರುವ ಶಾಖೆಗಳಲ್ಲಿ ವ್ಯವಸ್ಥಾಪಕರು ಸ್ಥಳೀಯ ವಕೀಲರಲ್ಲದ ಸಾಗರದಲ್ಲಿರುವ ವಕೀರಿಗೆ ಎಲ್.ಎಸ್.ಆರ್.ಗಳನ್ನು ಕಳುಹಿಸುತ್ತಿದ್ದಾರೆ ಇದ್ಯಾವ ನ್ಯಾಯ ? ಹೊಸನಗರ ತಾಲ್ಲೂಕಿನಲ್ಲಿರುವ ಬ್ಯಾಂಕ್‌ಗಳಲ್ಲಿ ಸಮರ್ಥ ಕಾನೂನು ಸಲಹೆಗಾರರು ಇಲ್ಲದಿದ್ದಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳಲು ವಿನಂತಿ.

ಸ್ಥಳೀಯ ಹೊಸನಗರ ತಾಲ್ಲೂಕ್ ಕಾನೂನು ಸಲಹೆಗಾರರಲ್ಲಿ ಕೆಲವು ಕಾನೂನು ಸಲಹೆಗಾರರ ಹೆಸರು ಹೇಳಿದರೇ ಗ್ರಾಹಕರು ಸದರಿವರ ಬಳಿ ಹೋಗಲು ಹಿಂಜರಿಯುತ್ತಾರೆ.

ಇನ್ನಾದರೂ ಬ್ಯಾಂಕಿನ ಅಧಿಕಾರಿವರ್ಗ ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗಕ್ಕೆ ಎಲ್.ಎಸ್.ಆರ್ ಪಡೆಯುವಾಗ ತಾಲ್ಲೂಕಿನ ಕಾನೂನು ಸಲಹೆಗಾರಿಗೆ ಸೂಚಿಸಿದರೆ ರೈತರ ಸಮಯ ಮತ್ತು ದುಂದುವೆಚ್ಚ ಕಡಿಮೆಯಾಗುವುದೆಂದು ನಾಗಭೂಷಣ, ಶಿವಕುಮಾರ್, ಸೋಮಶೇಖರ್, ಬೆನಕಪ್ಪ, ನಿಂಗಪ್ಪ ಜಿಲ್ಲಾ ಲೀಡ್‌ಬ್ಯಾಂಕ್ ಅಧಿಕಾರಿಗಳನ್ನು ಮತ್ತು ಎಸ್.ಬಿ.ಐ. ಅಧಿಕಾರಿ ವರ್ಗವನ್ನು ನೊಂದ ಗ್ರಾಹಕರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here