23.2 C
Shimoga
Sunday, November 27, 2022

ಭಕ್ಷಕನಾದ ಆರಕ್ಷಕ ; ಕಾಫಿನಾಡಿನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾದ ಕಥೆ ಇದು !

ಚಿಕ್ಕಮಗಳೂರು : ಪೊಲೀಸರೇ ಸೇರಿ ಚಿನ್ನದ ವ್ಯಾಪಾರಿಯನ್ನ ಬೆದರಿಸಿ 5 ಲಕ್ಷ ರೂ. ದರೋಡೆ ಮಾಡಿದ್ದಾರೆಂದು ದೂರು ದಾಖಲಾಗಿದೆ.

ಈ ಘಟನೆ ನಡೆದಿರವುದು ಕಾಫಿನಾಡು ಚಿಕ್ಕಮಗಳೂರಿನಲ್ಲಿ. ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೇದೆಗಳ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.

ಅಜ್ಜಂಪುರ ಠಾಣೆ ಪಿಐ ಲಿಂಗರಾಜ್, ಪೇದೆಗಳಾದ ಧನಪಾಲ್ ನಾಯ್ಕ, ಓಂಕಾರಮೂರ್ತಿ, ಶರತ್ ರಾಜ್ ಮೇಲೆ ದರೋಡೆ ಕೇಸ್ ಹಾಕಲಾಗಿದೆ.

ಚಿನ್ನ ಸಾಗಿಸುತ್ತಿದ್ದ ವ್ಯಾಪಾರಿ ಭಗವಾನ್ ಸಾಂಕ್ಲಾನನ್ನು ಬೆದರಿಸಿದ ಪೊಲೀಸರು ಬುಕ್ಕಾಂಬುದಿ ಟೋಲ್ ಬಳಿ ಹಣ ದರೋಡೆ ಮಾಡಿದ್ದಾರೆಂದು ದೂರಲಾಗಿದೆ. ತಾವೇ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯಲ್ಲಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇನ್ಸ್‌ಪೆಕ್ಟರ್, ಮೂವರು ಪೇದೆಗಳನ್ನು ಅಮಾನತುಗೊಳಿಸಿ ಎಸ್ ಪಿ ಆದೇಶಿಸಿದ್ದಾರೆ.

ಏನಿದು ಘಟನೆ ?

ದಾವಣಗೆರೆ ಮೂಲದ ಚಿನ್ನದ ವರ್ತಕ ಭಗವಾನ್ ಪುತ್ರ ರೋಹಿತ್ ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ.

ಮೇ ನಲ್ಲಿ ಭಗವಾನ್ ಪುತ್ರ ರೋಹಿತ್ 2 ಕೆ.ಜಿ. ಚಿನ್ನವನ್ನ ಬೇಲೂರಿನ ವರ್ತಕರಿಗೆ ನೀಡಲು ಹೋಗುವಾಗ ಪೊಲೀಸರು ರೋಹಿತ್ ಗೆ 10 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಆಗ ಭಗವಾನ್ ಕಾನೂನುಬದ್ಧ ದಾಖಲೆಗಳನ್ನು ನೀಡಿದರೂ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ರೋಹಿತ್ ಅಂತಿಮವಾಗಿ 5 ಲಕ್ಷ ರೂ. ನೀಡಿದ್ದಾರೆ.

ಬಳಿಕ ವರ್ತಕ ಭಗವಾನ್ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವರ್ತಕ ಭಗವಾನ್ ದೂರಿನನ್ವಯ ಎಫ್.ಐ.ಆರ್ ದಾಖಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!