24.3 C
Shimoga
Friday, December 9, 2022

ಭತ್ತಕ್ಕೆ ಕಂದುಜಿಗಿ ಹುಳು ಬಾಧೆ ; ಕಂಗಾಲಾದ ರೈತ ಸಮೂಹ

ರಿಪ್ಪನ್‌ಪೇಟೆ: ಅಡಿಕೆಗೆ ಎಲೆಚುಕ್ಕಿ ರೋಗ, ಮೆಕ್ಕೆಜೋಳಕ್ಕೆ ಹುಳು, ಮಂಗಗಳ ಕಾಟದಿಂದ ಬೇಸತ್ತಿರುವ ರೈತರಿಗೆ ಮೊತ್ತೊಂದು ಕಂಟಕ ಎದುರಾಗಿದ್ದು ಭತ್ತದ ಬೆಳೆಗೆ ಕಂದುಜಿಗಿ ಹುಳು ಬಾಧೆಯಿಂದಾಗಿ ರೈತರು ಕಂಗಲಾಗಿದ್ದಾರೆ.


ಮಲೆನಾಡಿನ ಶಿವಮೊಗ್ಗ ಜಿಲ್ಲೆ ಭತ್ತದ ಕಣಜ ಎಂದು ಹೇಳುವ ಕಾಲವೊಂದಿತ್ತು ಈಗ ಅದು ಕಡಿಮೆಯಾಗುತ್ತಾ ಇದ್ದು ಅಂತರ ರಾಜ್ಯ ಕೇರಳದವರಿಂದ ವಾಣಿಜ್ಯ ಬೆಳೆ ಶುಂಠಿಯಿಂದಾಗಿ ಎಲ್ಲರೂ ಭತ್ತವನ್ನು ಕೈಬಿಟ್ಟು ಶುಂಠಿ ಬೆಳೆಯ ಕಡೆ ಮಾರುಹೋಗಿ ಅಲ್ಪಸ್ವಲ್ಪ ಭತ್ತದ ಬೆಳೆಯನ್ನು ಹಾಕುವ ಸ್ಥಿತಿಯಲ್ಲಿದ್ದ ರೈತರಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಶುಂಠಿಗೆ ಬೆಲೆ ಇಲ್ಲದೆ ಕೊಳೆರೋಗದಿಂದಾಗಿ ಇಳುವರಿಯಲ್ಲಿ ಕುಂಠಿತ ಕಂಡ ರೈತರು ಅಡಿಕೆ ಬೆಳೆಯತ್ತ ಮುಖ ಮಾಡಿದ್ದರು ಅದು ಎಲೆಚುಕ್ಕಿ ರೋಗದ ಬಾಧೆಯಿಂದಾಗಿ ಅಡಿಕೆ ತೋಟ ಸಹ ಸಂಪೂರ್ಣವಾಗಿ ನಾಶವಾಗುವಂತಾಗಿದ್ದು ಜನಪ್ರತಿನಿಧಿಗಳು ಮತ್ತು ತೋಟಗಾರಿಕಾ ಇಲಾಖೆಯ ತಜ್ಞರ ತಂಡ ಭೇಟಿ ನೀಡಿ ಎಲೆಚುಕ್ಕಿ ರೋಗಕ್ಕೆ ಸರ್ಕಾರದ ಗಮನಸೆಳೆಯುವ ಮೂಲಕ ಕೋಟ್ಯಂತರ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು ಇದರ ಬೆನ್ನಲೇ ಈಗ ಮೆಲೆನಾಡಿನ ಹಲವು ಭಾಗದ ರೈತರ ಭತ್ತದ ಬೆಳೆಯಲ್ಲಿ ಕಂದುಜಿಗಿ ಹುಳದ ಬಾಧೆ ಕಾಣಿಸಿಕೊಳ್ಳುವುದರೊಂದಿಗೆ ಬೆಳೆ ಸಂಪೂರ್ಣವಾಗಿ ಕೈಗೆ ಸಿಗದಂತ ಸ್ಥಿತಿ ನಿರ್ಮಾಣವಾಗಿದೆ.


ಈಗಾಗಲೇ ಹೊಸನಗರ ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿನ ಜಮೀನಿನಲ್ಲಿ ಈ ರೋಗ ಕಾಣಿಸಿಕೊಂಡಿದ್ದು ತಕ್ಷಣ ಕೃಷಿ ಇಲಾಖೆ ಮುನ್ನಚ್ಚರಿಕಾ ಕ್ರಮ ಕೈಗೊಂಡು ರೈತರಿಗೆ ಮಾಹಿತಿ ನೀಡುವತ್ತ ಗಮನಹರಿಸಬೇಕಾಗಿದೆ.


ಇನ್ನಾದರೂ ಸರ್ಕಾರ ಕೂಡಲೇ ಗಮನಹರಿಸಿ ಕಂದುಜಿಗಿ ಹುಳದ ಬಾಧೆಯನ್ನು ನಿಯಂತ್ರಿಸುವ ಮೂಲಕ ರೈತರಿಗೆ ನೆರವು ಕಲ್ಪಿಸುವತ್ತ ಮುಂದಾಗುವರೆ ಕಾದುನೋಡುವಂತಾಗಿದೆ.

- Advertisement -

More articles

1 COMMENT

  1. ಎಲೆಚುಕ್ಕಿ ರೋಗಕ್ಕೆ AVAF -18 ಹಾಗೂ SOIL STAR ADVANCE ಸಾವಯುವ(Organic)ಲಿಕ್ವಿಡ್ ಬಳಕೆ ಮಾಡುವುದರ ಮೂಲಕ ಹತೋಟಿಗೆ ತರಬಹುದು.ನಗರ, ಹೊಸನಗರ,ಸಾಗರ,ತೀರ್ಥಹಳ್ಳಿ,ರಿಪನ್ಪೇಟೆ,ಗರ್ತಿಕೆರೆ,ಸೊರಬ,ಬನವಾಸಿ,ಶಿಕಾರಿಪುರ,ಶಿರಾಳಕೊಪ್ಪ,ಶಿವಮೊಗ್ಗ ಎಲ್ಲಾ ಪ್ರಮುಖ ಕೃಷಿ ಗೊಬ್ಬರದ ಅಂಗಡಿಗಳಲ್ಲಿ ಲಭ್ಯವಿದೆ.

    https://organicagrosolutions.com/

    https://in.docworkspace.com/d/sIPbwvbOAAaPssJoG.

    http://www.madariorganics.com

    ಬಳಸುವ ಕ್ರಮದ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ:
    ಮೋಬೈಲ್ :
    ವಿಜಯ್ -8722121456
    ಕಾಮನ ರಾಜಪ್ಪ -8618741845
    ಸುನೀತಾ – 8105348960

    MADARI ORGANATICS INNOVATIONS PVT LTD.
    #5378/10, Lali Hanumamma,
    Shamanur Rd,
    SS Layout, A Block,
    Davanagere
    KARNATAKA- 577 004

LEAVE A REPLY

Please enter your comment!
Please enter your name here

- Advertisement -

Latest article

error: Content is protected !!