ಭತ್ತಕ್ಕೆ 2500 ರೂ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹ

0
395

ರಿಪ್ಪನ್‌ಪೇಟೆ: ಈಗಾಗಲೇ ರಾಜ್ಯ ಸರ್ಕಾರ ಕ್ವಿಂಟಾಲ್ ಭತ್ತಕ್ಕೆ 1940 ರೂ.ಗೆ ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು ಇಂದಿನ ಗಗನಕ್ಕೇರಿರುವ ಗೊಬ್ಬರ ಇನ್ನಿತರ ಖರ್ಚು-ವೆಚ್ಚಗಳಿಗೆ ಲೆಕ್ಕಾಚಾರ ಹಾಕಿದರೆ ಅತಿ ಕಡಿಮೆಯಾಗುವುದು ಅದ್ದರಿಂದ ಸರ್ಕಾರ ಕ್ವಿಂಟಾಲ್ ಭತ್ತಕ್ಕೆ 2500 ರೂ. ಬೆಂಬಲ ಬೆಲೆಯನ್ನು ನಿಗದಿಪಡಿಸಿ ಘೋಷಿಸಲಿ ಎಂದು ಹೊಸನಗರ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಆಗ್ರಹಿಸಿದ್ದಾರೆ.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಘೋಷಿಸಿದಂತೆ ಭತ್ತ ಖರೀದಿಗೆ ಮುನ್ನವೇ ಪುನರ್ ಪರಿಶೀಲನೆ ನಡೆಸಿ ಪರಿಸ್ಕೃತ ದರವನ್ನು 2500 ರೂ. ಗೆ ಏರಿಸಿ ಖರೀದಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮತ್ತು ಕೃಷಿ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಕೂಲಿ ಮತ್ತು ಗೊಬ್ಬರ ಭೂಮಿ ಹದಗೊಳಿಸಲು ಬಳಸಲಾದ ಯಂತ್ರೋಪಕರಣಗಳ ಬಾಡಿಗೆ ಹೀಗೆ ಹಲವು ಖರ್ಚು-ವೆಚ್ಚಗಳ ಲೆಕ್ಕಾಚಾರ ಮಾಡಿದರೆ ರೈತಾಪಿ ವರ್ಗಕ್ಕೆ ಬಾರಿ ನಷ್ಟವಾಗುತ್ತಿದ್ದು ಸರ್ಕಾರ ಇದನ್ನು ಪರಿಶೀಲನೆ ನಡೆಸಿ ಕನಿಷ್ಟ 2500 ರೂ. ನಿಗದಿಪಡಿಸಿದರೆ ರೈತಾಪಿ ವರ್ಗ ಸುಧಾರಿಸುವುದೆಂದು ಮನವಿಯಲ್ಲಿ ವಿವರಿಸಿದ್ದಾಗಿ ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here