ಭದ್ರಾವತಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು..! ಏನಾಯ್ತು ಇವರಿಗೆ?

0
560

ಭದ್ರಾವತಿ: ಎಲ್ಲವೂ ಅಂದುಕೊಂಡಂತೆಯೇ ಮುಂದುವರಿದಿದ್ದರೆ, ಇವರು ಇನ್ನೊಂದು ವಾರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಮತ ಚಲಾಯಿಸುವ ಜತೆಗೆ, ಗೆಲುವಿನ ನಿರೀಕ್ಷೆಯಲ್ಲಿ ಇರುತ್ತಿದ್ದರು. ಆದರೆ ದುರದೃಷ್ಟವಶಾತ್ ಇಂದೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.

ಹೌದು ಭದ್ರಾವತಿಯ ಶೃತಿ ಮಂಜುನಾಥ್ (25) ಮೃತಪಟ್ಟವರು. ಇವರು ಏ. 27ರಂದು ನಡೆಯಲಿರುವ ಭದ್ರಾವತಿ ನಗರಸಭೆ ಚುನಾವಣಾ ಅಭ್ಯರ್ಥಿ ಆಗಿದ್ದರು. ಭದ್ರಾವತಿಯ 29ನೇ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ಬೆಳಗ್ಗೆ ಶೃತಿ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಂಜೆ ವೇಳೆ ಮೃತಪಟ್ಟಿದ್ದಾರೆ.

ಶೃತಿಯವರ ಪತಿ ಮಂಜುನಾಥ್ ಈ ಹಿಂದೆ ಜೆಡಿಎಸ್ ನಲ್ಲಿದ್ದರು. ನಂತರ ಚುನಾವಣೆ ಘೋಷಣೆ ಆದ ನಂತರ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಎಂದು ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here