ಭದ್ರಾವತಿ: ಮಾ.18 ರಂದು ಭದ್ರಾವತಿಯ ಮಾನ್ಯ 02ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ, ಚಂದ್ರಶೇಖರ್ ಇ ಬಣಕಾರ್ ರವರು ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಈ ಕೆಳಕಂಡ 05 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡ ನಂತರ ಒಟ್ಟು 04 ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
1) ಅಪರಾಧ ಸಂಖ್ಯೆ 09/2020 ರಲ್ಲಿ ರಾಘವೇಂದ್ರ ಕಾಂಡಿಕೆ, ಸಿಪಿಐ ನಗರವೃತ್ತ, ಭದ್ರಾವತಿ ರವರು ತನಿಖಾಧಿಕಾರಿಗಳಾಗಿದ್ದು, ಪ್ರಕರಣದ ಆರೋಪಿ ವೆಂಕಟೇಶ @ ಕೆಮ್ಮಣ್ಣು ಗುಂಡಿ ವೆಂಕಟೇಶ, 42 ವರ್ಷ ವಾಸ ಭದ್ರಾವತಿ ಟೌನ್ ಈತನಿಗೆ ಕಲಂ 457 ಐಪಿಸಿಯ ಪ್ರಕಾರ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ಐಪಿಸಿ ಕಲಂ 380 ರ ಪ್ರಕಾರ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿರುತ್ತದೆ.
2) ಅಪರಾಧ ಸಂಖ್ಯೆ 86/2020ರಲ್ಲಿ ರಾಘವೇಂದ್ರ ಕಾಂಡಿಕೆ, ಸಿಪಿಐ ನಗರವೃತ್ತ, ಭದ್ರಾವತಿ ರವರು ತನಿಖಾಧಿಕಾರಿಗಳಾಗಿದ್ದು, ಪ್ರಕರಣದ ಆರೋಪಿ ವೆಂಕಟೇಶ @ ಕೆಮ್ಮಣ್ಣು ಗುಂಡಿ ವೆಂಕಟೇಶ, 42 ವರ್ಷ ವಾಸ ಭದ್ರಾವತಿ ಟೌನ್ ಈತನಿಗೆ ಕಲಂ 457 ಐಪಿಸಿಯ ಪ್ರಕಾರ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಮತ್ತು ಐಪಿಸಿ ಕಲಂ 380 ರ ಪ್ರಕಾರ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿರುತ್ತದೆ.
3) ಅಪರಾಧ ಸಂಖ್ಯೆ 89/2020ರಲ್ಲಿ ರಾಘವೇಂದ್ರ ಕಾಂಡಿಕೆ, ಸಿಪಿಐ ನಗರವೃತ್ತ, ಭದ್ರಾವತಿ ರವರು ತನಿಖಾಧಿಕಾರಿಗಳಾಗಿದ್ದು, ಪ್ರಕರಣದ ಆರೋಪಿ ಜಗದೀಶ @ ಜಗ್ಗ @ ಬೆಂಕಿ ಜಗ್ಗ, 34 ವರ್ಷ ವಾಸ ಭದ್ರಾವತಿ ಟೌನ್ ಈತನಿಗೆ ಕಲಂ 353 ಐಪಿಸಿಯ ಪ್ರಕಾರ ಒಂದು ವರ್ಷ, ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ಕಲಂ 323 ಐಪಿಸಿ ಪ್ರಕಾರ 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿರುತ್ತದೆ.
4) ಅಪರಾಧ ಸಂಖ್ಯೆ 88/2020ರಲ್ಲಿ ಲಿಂಗಮೂರ್ತಿ ಎಂ ಆರ್, ಎಎಸ್ಐ, ಹಳೆನಗರ ಪೊಲೀಸ್ ಠಾಣೆ ರವರು ತನಿಖಾಧಿಕಾರಿಗಳಾಗಿದ್ದು, ಪ್ರಕರಣದ ಆರೋಪಿ ಜಗದೀಶ @ ಜಗ್ಗ @ ಬೆಂಕಿ ಜಗ್ಗ, 34 ವರ್ಷ ವಾಸ ಭದ್ರಾವತಿ ಟೌನ್ ಈತನಿಗೆ ಕಲಂ 435 ಐಪಿಸಿಯ ಪ್ರಕಾರ 2 ವರ್ಷ, ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿರುತ್ತದೆ.
5) ಅಪರಾಧ ಸಂಖ್ಯೆ 19/2013 ರಲ್ಲಿ ಜೆ.ಜೆ ತಿರುಮಲೇಶ್, ಸಿಪಿಐ ನಗರವೃತ್ತ ರವರು ತನಿಖಾಧಿಕಾರಿಗಳಾಗಿದ್ದು, ಪ್ರಕರಣದ ಆರೋಪಿಗಳಾದ 1) ನೇತ್ರಾವತಿ 28 ವರ್ಷ, ವಾಸ ಭದ್ರಾವತಿ ಮತ್ತು 2) ಲತಾ 30 ವರ್ಷ, ವಾಸ ಭದ್ರಾವತಿರವರಿಗೆ ಕಲಂ 186 ಐಪಿಸಿಯ ಪ್ರಕಾರ ಒಂದು ತಿಂಗಳು ಸಾದಾ ಕಾರಾಗೃಹ ಶಿಕ್ಷೆ, ಮತ್ತು 500/-ರೂ ದಂಡ ತಪ್ಪಿದಲ್ಲಿ 10 ದಿನಗಳ ಕಾಲ ಕಾರಾಗೃಹ ಸಾದಾ ಸಜೆ ವಿಧಿಸಲಾಗಿದೆ ಹಾಗೂ ಐಪಿಸಿ ಕಲಂ 504 ರ ಪ್ರಕಾರ 2 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 5,000/- ರೂ ದಂಡ ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿರುತ್ತೆ.
ಮೇಲ್ಕಂಡ 05 ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಶ್ರೀ ಮಂಜುನಾಥ್ ಸಿ, ಸಹಾಯಕ ಸರ್ಕಾರಿ ಅಭಿಯೋಜಕರವರು ವಾದವನ್ನು ಮಂಡಿಸಿರುತ್ತಾರೆ.