ಭದ್ರಾ ನದಿಗೆ ಹಾರಿದ ಅಂಗವಿಕಲ ಯುವಕ..! ಮಾಗುಂಡಿ – ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಶೋಧ ಕಾರ್ಯ

0
935

ಎನ್.ಆರ್.ಪುರ: ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾಗುಂಡಿ ಬಳಿಯ ಭದ್ರಾನದಿ ಸೇತುವೆಯಿಂದ ಜಿಗಿದು ಅಂಗವಿಕಲತೆ ಪೀಡಿತ ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯದ ಮೇಲೆ ಯುವಕನ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸದೆ ಇರುವುದರಿಂದ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಗಬ್ಗಲ್ ಹತ್ತಿರದ ಬೀರ್ಗೂರು ಗ್ರಾಮದ ಸದಾನಂದ ನಾಯಕ್ (35) ಶುಕ್ರವಾರ ಸಂಜೆ 5:30 ರ ಸುಮಾರಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನೆ ಎನ್ನಲಾಗಿದ್ದು ಸೇತುವೆ ಮೇಲೆಯೇ ಸದಾನಂದನ ತ್ರಿಚಕ್ರ ಬೈಕ್ ದೊರೆತ್ತಿದ್ದು ಇದು ಅನುಮಾನಕ್ಕೆ ಕಾರಣವಾಗಿದೆ.

ಬೈಕ್ ನೋಡಿದ ಸ್ಥಳೀಯ ಸಾರ್ವಜನಿಕರು ಬಾಳೆಹೊನ್ನೂರು ಮತ್ತು ಬಾಳೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ‌. ಆದರೆ, ಮಾಗುಂಡಿಯ ಭದ್ರಾ ನದಿ ಸೇತುವೆಯ ಅರ್ಧ ಭಾಗ ಬಾಳೆಹೊನ್ನೂರು ಠಾಣೆ ಹಾಗೂ ಉಳಿದ ಅರ್ಧ ಭಾಗ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆಯ ವ್ಯಾಪ್ತಿಗೆ ಒಳಪಡುವುದರಿಂದ ಸರಹದ್ದಿನ ಗೊಂದಲದಿಂದಾಗಿ ಶನಿವಾರ ಮಧ್ಯಾಹ್ನದ ವರೆಗೂ ನದಿಯಲ್ಲಿ ಮೃತದೇಹದಕ್ಕೆ ಪೊಲೀಸರು ಹುಡುಕಾಟ ನಡೆಸುವ ಕಾರ್ಯಚರಣೆಯನ್ನು ಆರಂಭಿಸಿಲ್ಲ.

ಇದರಿಂದ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿ ಆಯಿತು. ಇಂದು ಮಧ್ಯಾಹ್ನದ ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದಿದ್ದು ಮೃತದೇಹದ ಹುಡುಕಾಟದ ಕಾರ್ಯಾಚರಣೆ ಆರಂಭಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here