ಭದ್ರಾ ವನ್ಯಜೀವಿ ವಿಭಾಗದಲ್ಲಿ ಜೆಸಿಬಿ ಮೂಲಕ ಆನೆ ಬೆದರಿಸಿದ ಕಿಡಿಗೇಡಿಗಳು !

0
626

ತರೀಕೆರೆ: ಭದ್ರಾ ವನ್ಯಜೀವಿ ವ್ಯಾಪ್ತಿಯ ಮುತ್ತೋಡಿ ವಿಭಾಗದ ತಣಿಗೆಬೈಲು ಸಮೀಪದಲ್ಲಿ ಪುಟ್ಟ ಮರಿಯೊಂದಿಗಿದ್ದ ಆನೆ ಮರಿಯನ್ನು ಜೆಸಿಬಿ ಮೂಲಕ ಘಾಸಿಗೊಳಿಸಿದ ಘಟನೆ ನಡೆದಿದೆ.

ಭದ್ರಾ ವನ್ಯಜೀವಿ ವಿಭಾಗದಲ್ಲಿ ಕಾರ್ಯನಿಮಿತ್ತ ತೆರಳುತ್ತಿದ್ದ ಜೆಸಿಬಿಗೆ ಮರಿಯೊಂದಿಗಿದ್ದ ಆನೆ ಎದುರಾಗಿದೆ. ಈ ವೇಳೆ ಆನೆಯ ಮೇಲೆ ಜೆಸಿಬಿ ಮೂಲಕ ಆನೆಗೆ ಭಯಗೊಳಿಸಿದ್ದಾರೆ.

ಆನೆಯನ್ನ ಬೆದರಿಸಲು ಅವುಗಳ ಬಳಿಯೇ ಜೆಸಿಬಿಯನ್ನು ಚಾಲಕ ನುಗ್ಗಿಸಿದ್ದು ಆನೆ ಬೆದರುವ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆಹಿಡಿದು ವಿಕೃತವಾಗಿ ವರ್ತಿಸಿದ್ದು ಈ ವರ್ತನೆಗೆ ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಸಿಬಿಯಲ್ಲಿದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಪರಿಸರಪ್ರಿಯರು ಒತ್ತಾಯಿಸಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಸೂಕ್ತ ಕ್ರಮಗಳನ್ನು ತಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ

ಜಾಹಿರಾತು

LEAVE A REPLY

Please enter your comment!
Please enter your name here