ಭಯೋತ್ಪಾದನ ಸಂಘಟನೆಯ ಪರ ಕಾಂಗ್ರೆಸ್ ವಕಾಲತ್ತು ; ಶಾಸಕ ಸಿ.ಟಿ ರವಿ ಆರೋಪ

0
182

ಚಿಕ್ಕಮಗಳೂರು : ಆರ್.ಎಸ್.ಎಸ್. ರಾಷ್ಟ್ರಭಕ್ತ ಸಂಘಟನೆ ಜೊತೆ ಹೋಲಿಕೆ ಮಾಡುತ್ತಾ ಅಲ್‍ಖೈದಾ ಭಯೋತ್ಪಾದನೆ ಸಂಘಟನೆಗೆ ಕಾಂಗ್ರೆಸ್ ಪಕ್ಷ ವಕಾಲತ್ತು ವಹಿಸಿಸುತ್ತಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಟೀಕಿಸಿದರು. ಅಂತರರಾಷ್ಟ್ರೀಯ ಅಲ್‍ಖೈದಾ ಭಯೋತ್ಪಾದನೆ ಸಂಘಟನೆಯ ಬಿಡುಗಡೆಯಾದ ವಿಡಿಯೋ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್‍ಖೈದಾ-ಕಾಂಗ್ರೆಸ್ ಒಂದೇ ವಿಷಯದ ಬಗ್ಗೆ ಮಾತನಾಡುತ್ತಿದಾರೆ ಎಂದು ಆರೋಪಿಸಿದರು.

ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಬೇಕೇ ಹೊರತು ಆರ್.ಎಸ್.ಎಸ್. ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಾಣೆಯಾದವರಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆರ್.ಎಸ್.ಎಸ್. ದೇಶಭಕ್ತ ಹಾಗೂ ದೇಶ ಕಾಯುವ ಸಂಘಟನೆಯಾದರೆ ಅಲ್‍ಖೈದಾ ಬಾಂಬ್‌ಗಳ ಮೇಲೆ ವಿಶ್ವಾಸವಿಟ್ಟಿರೋ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಟೀಕಿಸಿದರು.

ಇವೆರಡರ ನಡುವೆ ಹೋಲಿಕೆ ಬುದ್ಧಿ ಇಲ್ಲದವರು ಮಾತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರು ಅಲ್‍ಖೈದಾ ಭಯೋತ್ಪಾದನೆ ಸಂಘಟನೆ ಮೇಲೆ ಸಿಂಪಥಿ ತೋರುತ್ತಿದ್ದಾರೆ ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here