ಭರವಸೆಯಾಗಿಯೇ ಉಳಿದ ಸಾರಿಗೆ ಬಸ್‌ ಸೌಲಭ್ಯ !

0
427

ರಿಪ್ಪನ್‌ಪೇಟೆ: ಕಳೆದ ಒಂದು ತಿಂಗಳ ಹಿಂದೆ ಬೆಳ್ಳೂರು ಗ್ರಾಮ ಪಂಚಾಯ್ತಿನಲ್ಲಿ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ’ ಸರ್ಕಾರದ ಕಾರ್ಯಕ್ರಮದಲ್ಲಿ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮ ಮತ್ತು ಮಜರೆ ಹಳ್ಳಿಗಳ ವಿದ್ಯಾರ್ಥಿಗಳು ಮತ್ತು ನಾಗರೀಕರಿರು ಬಸ್‌ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಲಾಗಿದ್ದು ಮನವಿ ಸ್ವೀಕರಿಸಿ ಖಾಸಗಿ ಬಸ್ ಮಾಲೀಕರೊಂದಿಗೆ ಚರ್ಚಿಸಿ ನಂತರ‌ ಸರ್ಕಾರಿ ಬಸ್ ಓಡಿಸುವ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಲಾಗಿ ಒಂದು ತಿಂಗಳಾದರೂ ಜಿಲ್ಲಾಧುಕಾರಿಗಳ ಭರವಸೆ ಭರವಸೆಯಾಗಿಯೇ ಉಳಿಯುವಂತ್ತಾಗಿದೆ ಎಂದು ವಿದ್ಯಾರ್ಥಿ, ನಾಗರೀಕರು ತಮ್ಮ ನೋವನ್ನು ಮಾಧ್ಯಮದವರಲ್ಲಿ ಹಂಚಿಕೊಂಡಿದ್ದು ಹೀಗೆ.

ನಮ್ಮೂರಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರವೇ ಜನರ ಬಳಿ ಬಂದಿದೆ ನಮ್ಮಗಳ ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ದೊರಕುವುದೆಂಬ ಮಹದಾಸೆ ಹೊಂದಿದ್ದ ಇಲ್ಲಿನ ನಾಗರೀಕರಿಗೆ ಕೊನೆಗೆ ಸಮಸ್ಯೆಗೆ ಪರಿಹಾರ ದೊರಕದೇ ಸಮಸ್ಯೆ ಪರಿಹಾರದ ಮರಿಚಿಕೆಯಾಗಿಯೇ ಉಳಿಯುವಂತಾಗಿದೆ ಎಂದು ಗ್ರಾಮಸ್ಥರು ವಿದ್ಯಾರ್ಥಿಗಳು ಆತಂಕಕ್ಕೆ ಕಾರಣವಾಗಿದೆ.

ಬಸ್ ಸೌಲಭ್ಯಕ್ಕಾಗಿ ಜನಪ್ರತಿನಿಧಿಗಳ ಗಮನಸೆಳೆಯಲಾಗಿದ್ದು ಯಾವುದೇ ಪ್ರಯೋಜನವಾಗದೇ ಇದ್ದು ಸರ್ಕಾರವೇ ಊರಿಗೆ ಬಂದಿರುವಾಗ ತಕ್ಷಣ ಗ್ರಾಮೀಣ ಭಾಗದ ಜನರ ಮೂಲಭೂತ ಸಮಸ್ಯೆಗೆ ಪರಿಹಾರ ದೊರಕುವುದೆಂಬ ಆಶಾಭಾವನೆಯಲ್ಲಿದ್ದ ನಾಗರೀಕರು ಕುಗ್ರಾಮದ ಶಾಲಾ, ಕಾಲೇಜ್ ಮಕ್ಕಳ ವ್ಯಾಸಂಗಕ್ಕೆ ಬುಕ್ಕಿವರೆಯಿಂದ ಬೆಳ್ಳೂರು, ಹಾರೋಹಿತ್ತಲು ಮಾರ್ಗವಾಗಿ ಅರಸಾಳು,‌ರಿಪ್ಪನ್‌ಪೇಟೆ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸಾಗರ ಹೀಗೆ ಐಟಿಐ ಪದವಿ, ಪದವಿ ಪೂರ್ವ ಕಾಲೇಜ್ ಸರ್ಕಾರಿ ಪ್ರೌಢಶಾಲೆ ಹೀಗೆ ಉನ್ನತ ವ್ಯಾಸಂಗಕ್ಕಾಗಿ ಗ್ರಾಮೀಣ ಪ್ರದೇಶದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದು ಅಲ್ಲದೆ ಅನಾರೋಗ್ಯದಿಂದ ಬಳಲುವವರು ಗರ್ಭಿಣಿಯರು, ಇನ್ನಿತರ ಅವಘಡಕ್ಕೆ ಒಳಗಾದವರನ್ನು ತುರ್ತು ಚಿಕಿತ್ಸೆಗಾಗಿ ಕರೆತರಲು ಸರಿಯಾದ ಸಾರಿಗೆ ಸೌಲಭ್ಯವಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆಯಲಾಗಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲವೆಂದು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಬಳಿ ತೋಡಿಕೊಂಡರು.

ಇನ್ನಾದರೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮೀಣ ಪ್ರದೇಶದ ರೈತ ನಾಗರೀಕರಿಗೆ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವತ್ತಾ ಮುಂದಾಗುವರೇ ಕಾದು ನೋಡಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here