ಭರ್ಜಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ಜೊತೆಗೆ ದಂಡ !

0
524

ಶಿವಮೊಗ್ಗ: ಭರ್ಜಿಯಿಂದ ವ್ಯಕ್ತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ಜೊತೆಗೆ 5 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.

ಏನಿದು ಘಟನೆ ?

2018ರ ಆ.12 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಳ ಬಡಾವಣೆ ಶಿವಮೊಗ್ಗ ಟೌನ್ ವಾಸಿ ರಿಚರ್ಡ್ ಸಂತೋಷ್ (32) ಗೋಪಾಳದ ವನಸಿರಿ ಪಾರ್ಕ್ ಹತ್ತಿರ ಹೋಗುತ್ತಿರುವಾಗ ಡಿಯೋ ಬೈಕ್ ನಲ್ಲಿ ಬಂದ ನಿತಿನ್, ದೀಕ್ಷಿತ್ ಮತ್ತು ಕಿರಣ್ ರವರುಗಳು ಭರ್ಜಿಯಿಂದ ರಿಚರ್ಡ್ ಸಂತೋಷ್ ರವರ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಕಲಂ 307 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಆಗಿನ ತನಿಖಾಧಿಕಾರಿಗಳಾದ ತುಂಗಾನಗರ ಪೊಲೀಸ್ ಠಾಣೆ ಪಿಎಸ್ಐ ಅಣ್ಣಯ್ಯ, ಕೆ. ರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪ್ರಕರಣದ ವಾದ ಮಂಡಿಸಿದ್ದು, ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಮಾನು ಕೆ. ಎಸ್ ರವರು ಇಂದು ಶಿವಮೊಗ್ಗದ ಪುರದಾಳ್ ಗೋವಿಂದಪುರ ನಿವಾಸಿ ನಿತಿನ್ (22) ಶರಾವತಿನಗರ ನಿವಾಸಿ 2) ಧೀಕ್ಷಿತ್ (21) ಮತ್ತು ನವುಲೆ ವಿನಾಯಕನಗರ ನಿವಾಲಿ ಕಿರಣ್ (23) ಇವರುಗಳ ವಿರುದ್ಧ ಕಲಂ 307 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಈ 03 ಜನ ಆರೋಪಿಗಳಿಗೆ 03 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 5,000 ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 02 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here