23.2 C
Shimoga
Sunday, November 27, 2022

ಭಾರತೀಯ ಪ್ರಾಚೀನರ ರಕ್ಷಣೆ ಮನೋಭಾವ ಅನ್ಯೋನ್ಯವಾದುದು ; ಅಮೇರಿಕಾ ಫ್ಲಾರಿಡಾದ ಧೃವಗೋರಿಕ್‌

ಸೊರಬ: ನರಸಿಂಹ ಶಿಲ್ಪಗಳಲ್ಲಿನ ಯೋಗಭಂಗಿ ಗಮನಸೆಳೆದಿದ್ದು ಸೊರಬ ಚಂದ್ರಗುತ್ತಿ ಹೋಬಳಿಯ ಕಮರೂರು ವಿಗ್ರಹದಲ್ಲಿ ಮೂಲಭದ್ರ ಪ್ರಾಣಾಯಾಮ ಭಂಗಿ ಅಪರೂಪವಾಗಿದೆ, ಅದೇ ರೀತಿ ಕುಪ್ಪೆಯಲ್ಲಿನ ಸಿಂಹವಿಗ್ರಹ ಕೂಡ ಕೌತುಕವೆನಿಸಿದ್ದು ವಿರಳವಾಗಿರವ ಪ್ರಾಣಿಗಳಿಗೆ ದೈವತ್ವದ ಕಲ್ಪನೆ ನೀಡಿ ಪೂಜಿಸುವ ಜೊತೆಗೆ ಭಾರತೀಯ ಪ್ರಾಚೀನರ ರಕ್ಷಣೆ ಮನೋಭಾವ ಅನ್ಯೋನ್ಯವಾದುದು ಎಂದು ಅಮೇರಿಕಾ ಫ್ಲಾರಿಡಾದ ಧೃವಗೋರಿಕ್‌ ಹೇಳಿದರು.


ಪ್ರಸ್ತುತ ರಾಜ್ಯ ತಿರುಗಾಟದಲ್ಲಿರುವ ಅವರು ಚಂದ್ರಗುತ್ತಿ ಹೋಬಳಿ ಕುಂಟಗಳಲೆ, ಕಮರೂರು ನರಸಿಂಹ ದೇಗುಲಗಳಿಗೆ ಭೇಟಿನೀಡಿ ನಂತರ ಯಲಸಿ ಗ್ರಾಮದ ಯೋಗಾನರಸಿಂಹ ದೇವಸ್ಥಾನಕ್ಕೆ ತೆರಳಿ ರಾಜ್ಯದ ಅನೇಕ ನರಸಿಂಹ ವಿಗ್ರಹ, ಅವುಗಳ ಭಂಗಿ, ಶಿಲ್ಪ ಶ್ರೀಮಂತಿಕೆ ಮುಂತಾದ ವಿಚಾರಗಳ ಕುರಿತು ಸಂಶೋಧಕ ಬಿಚ್ಚುಗತ್ತಿಯವರೊಂದಿಗೆ ಸುದೀರ್ಘ ಚರ್ಚಿಸಿದರು.


ಯೋಗಭಂಗಿಯ ಬಗ್ಗೆಯೆ ಪ್ರತ್ಯೇಕ ಅಧ್ಯಯನ ಕೃತಿ ಸಿದ್ಧಪಡಿಸುತ್ತಿರುವುದಾಗಿ ಹೇಳಿದ ಅವರು, ನರಸಿಂಹ ವಿಗ್ರಹ ತೀವ್ರ ಕುತೂಃಲಕಾರಿ ಎನಿಸಿದ್ದು, ಹಲವು ವರ್ಷಗಳಿಂದ ಭಾರತದ ನರಸಿಂಹ ವಿಗ್ರಹದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಮಾನವ ಮತ್ತು ಪ್ರಾಣಿ ಅವಿನಾಭಾವ ಸಂಬಂಧದ ಸಮೀಕರಣವೋ, ಪ್ರಾಣಿಜನ್ಯ ಗಣಗಳ ಸಂಕೇತವೋ ಆಗಿರಬಹುದಾದ ನರಸಿಂಹನ ವ್ಯಾಪ್ತಿ ಅನಂತವಾದುದು. ವರ್ಷದ 6 ತಿಂಗಳು ಭಾರತ ಪ್ರವಾಸದಲ್ಲಿರುವ ನನಗೆ ಕರ್ನಾಟಕ ರಾಜ್ಯದ ಪ್ರಾಚೀನ ನರಸಿಂಹ ವಿಗ್ರಹಗಳು ಗಮನ ಸೆಳೆದಿವೆ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಮೊದಲ ಭಾಗದ ನರಸಿಂಹ ಶಿಲ್ಪಗಳ ಬೃಹತ್‌ ಕೃತಿಯನ್ನು ಸಂಶೋಧಕ ಬಿಚ್ಚುಗತ್ತಿಯವರಿಗೆ ನೀಡಿದರು.


ಇವರೊಂದಿಗೆ ಸಿನೆಮಾಟೋಗ್ರಫಿ ತಜ್ಞರಾದ ವಿವೇಕ ಎಸ್.ಕೃಷ್ಣಾನಂದ್‌ ಸೊರಬ, ಬೆಂಗಳೂರು ರಾಮಪ್ರಸಾದ್‌, ಚಟ್ನಳ್ಳಿ ವಸಿಷ್ಠಭಟ್‌, ಚೀಲೂರು ಅಭಯ್‌ ಡಿ.ಎಂ. ಆಗಮಿಸಿದ್ದರು.

ಸೊರಬದ ಕೆಲವು ನರಸಿಂಹ ಕ್ಷೇತ್ರಗಳಿಗೆ ಅಮೇರಿಕಾ ಫ್ಲಾರಿಡಾದ ಧೃವಗೋರಿಕ್‌ ಭೇಟಿ ನೀಡಿ ಯಲಸಿ ಗ್ರಾಮದಲ್ಲಿ ತಮ್ಮ ಮೊದಲ ಭಾಗದ ನರಸಿಂಹ ಶಿಲ್ಪಗಳ ಕೃತಿಯನ್ನು ಸಂಶೋಧಕ ಬಿಚ್ಚುಗತ್ತಿಯವರಿಗೆ ನೀಡಿ ಸಂತಸ ಹಂಚಿಕೊಂಡರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!