ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆ ಯೋಗ ; ನ್ಯಾಯಾಧೀಶ ಕೆ. ರವಿಕುಮಾರ್

0
325

ಹೊಸನಗರ: ಇಂದು ವಿಶ್ವ ಯೋಗ ದಿನಾಚರಣೆಯನ್ನು ಪ್ರಧಾನ ವ್ಯವಹಾರ ನ್ಯಾಯಾಧೀಶ ಕೆ ರವಿಕುಮಾರ್ ರವರು ಉದ್ಘಾಟಿಸಿದರು.

ಯೋಗ ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಯೋಗ ಮನಸ್ಸು ಹಾಗೂ ಶರೀರ ಆಲೋಚನೆ ಹಾಗೂ ಕ್ರಿಯೆ ಸಂಯಮ ಹಾಗೂ ಸಾರ್ಥಕತೆ ಮತ್ತು ಆರೋಗ್ಯ ಹಾಗೂ ಯೋಗಕ್ಷೇಮದ ಕಡೆ ಸಮಗ್ರ ದೃಷ್ಟಿಕೋನ ಹೊಂದಿದೆ.

ಯೋಗ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಆಯಸ್ಸನ್ನು ವೃದ್ಧಿಗೊಳಿಸುವಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಯೋಗ ಮಾಡುವುದರ ಮೂಲಕ ಹಾಗೂ ಆಯುಷ್ಯ ಹೊಂದಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪುಷ್ಪಲತಾ, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಯೋಗಗುರು ರಾಧಾಕೃಷ್ಣ ಪೂಜಾರಿ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here