ಭಾರತ ದೇಶದ ಪ್ರಗತಿಯಿಂದಲೇ ವಿಶ್ವದ ಪ್ರಗತಿ ಎಂದು ಸಾರಿದವರು ಸ್ವಾಮಿ ವಿವೇಕಾನಂದ: ಕೆ.ಎನ್ ರಮೇಶ್

0
88

ಚಿಕ್ಕಮಗಳೂರು: ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿ, ಆ ಮೂಲಕ ಭಾರತದ ಪ್ರಗತಿಯಿಂದಲೇ ವಿಶ್ವವು ಉದ್ದಾರವಾಗಬಲ್ಲದು ಎಂದು ಸ್ವಾಮಿ ವಿವೇಕಾನಂದರು ಬಲವಾಗಿ ಪ್ರತಿಪಾದಿಸಿದ್ದರು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದ್ದರು.

ಜಿಲ್ಲಾಧಿಕಾರಿ ಕಚೇರಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಪ್ರತಿಯೊಬ್ಬರು ಗುರಿ ಇಟ್ಟು, ಅದನ್ನು ಈಡೇರಿಸಲು ಗುರು ಮತ್ತು ಶ್ರಮ, ಆತ್ಮ ವಿಶ್ವಾಸವನ್ನು ಹೊಂದಬೇಕು ಎಂಬುದು ವಿವೇಕಾನಂದರ ನಿಲುವಾಗಿತ್ತು. ವಿಶೇಷವಾಗಿ ಯುವ ಜನತೆ ಇದರಲ್ಲಿ ಮುಂದೆ ಬರಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶಿಕ್ಷಕರು ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರಿಂದ ಭವಿಷ್ಯದಲ್ಲಿ ಸದೃಢ ಪ್ರಜೆಗಳು ಮೂಡಲು ಸಾಧ್ಯವಿದೆ ಎಂದರು.

ಉಪನ್ಯಾಸಕಿ ನಾಗಶ್ರೀ ಅವರು ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಹಿಂದೆ ಅವರ ತಂದೆ ತಾಯಿಗಳ ಪ್ರಭಾವ ಸಾಕಷ್ಟು ಪರಿಣಾಮ ಬೀರಿವೆ. ಇಂದಿನ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಬೆಳೆಸುವಲ್ಲಿ ಅವರ ಪಾಲಕರ ಚಿಂತನೆಗಳೇ ಮಹತ್ತರವಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ, ಚಿಂತನೆ ನೀಡುವುದು ಅಗತ್ಯವಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಆರ್ಥಿಕ ಸಹಕಾರ ನೀಡಿದ ಅಳಸಿಂಗ ಪೆರುಮಾಳ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಹಿರಿಯ ಉಪವಿಭಾಗಾಧಿಕಾರಿ ಡಾ. ನಾಗರಾಜ್, ನಗರಸಭೆ ಸದಸ್ಯ ವರಸಿದ್ಧಿ ವೇಣುಗೋಪಾಲ್, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್. ಮಹೇಶ್ ಮತ್ತಿತರರು ಇದ್ದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹೆಚ್.ಪಿ. ಸ್ವಾಗತಿಸಿದರು. ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸರಳವಾಗಿ ನಡೆಯಿತು

ಜಾಹಿರಾತು

LEAVE A REPLY

Please enter your comment!
Please enter your name here