ರಿಪ್ಪನ್ಪೇಟೆ: ಭಾರಿ ಮಳೆಗೆ ಮನೆ ಮೇಲ್ಛಾವಣಿ ಮತ್ತು ಗೋಡೆ ಸಂಪೂರ್ಣ ಕುಸಿದು ಹಾನಿಗೀಡಾಗಿದ್ದು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇರುವಕ್ಕಿ ಗ್ರಾಮದ ಮಜರೆ ಗುಡುಗೋಡು ಗ್ರಾಮದ ಲಿಂಗಪ್ಪ ಬಿನ್ ಹಾಲಪ್ಪ ಎಂಬುವರ ವಾಸದ ಮನೆಯು ಮಳೆ-ಗಾಳಿಗೆ ಸಂಪೂರ್ಣ ಕುಸಿದು ಹೋಗಿದೆ ತುರ್ತು ಪರಿಹಾರವನ್ನಾಗಿ 10 ಸಾವಿರ ರೂ ಚೆಕ್ಅನ್ನು ಇಂದು ಸಂಜೆಯೆ ಮನೆ ಕಳೆದುಕೊಂಡ ಕುಟುಂಬಕ್ಕೆ ತಲುಪಿಸುವಂತೆ ತಹಶೀಲ್ದಾರ್ರಿಗೆ ಸೂಚಿಸಲಾಗಿದೆ. ಅಲ್ಲದೆ ಕಳೆದ ಎರಡು ದಿನಗಳ ಹಿಂದೆ ಕೇವಲ 3 ಗಂಟೆಯಲ್ಲಿ ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು ಸರ್ಕಾರ ಕೊಡುವ ಪರಿಹಾರದ ಮೊತ್ತ ಕಡಿಮೆಯಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿ ಸರ್ಕಾರದ ಮಟ್ಟದಲ್ಲಿ ಅದನ್ನು ಉದ್ಯೋಗ ಖಾತ್ರಿ ಯೋಜನೆಗೆ ಒಳಪಡಿಸಿ ಮನೆಯವರು ತಮ್ಮ ಜಾಬ್ಕಾರ್ಡ್ ಮೂಲಕ ಸ್ವತಃ ಕೆಲಸ ಮಾಡಿಕೊಂಡರೆ ಇನ್ನೂ ಹೆಚ್ಚಿನ ಮೊತ್ತ ಕೈಗೆ ಸಿಗುವುದೆಂಬ ಬಗ್ಗೆ ಶಾಸನ ಸಭೆಯಲ್ಲಿ ಚರ್ಚಿಸಿ ಅನುಷ್ಟಾನಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಪತ್ರಕರ್ತರಿಗೆ ವಿವರಿಸಿದರು.

ಸಂಪೂರ್ಣ ಮನೆ ಹಾನಿಗೀಡಾದರೆ 5 ಲಕ್ಷ ರೂ. ಹೀಗೆ ಮೂರು ವಿಭಾಗದಲ್ಲಿ ಪರಿಹಾರ ನೀಡುವ ಬಗ್ಗೆ ಸರ್ಕಾರ ನಿಗದಿ ಪಡಿಸಿದೆ ಅಲ್ಲದೇ ಕೇಂದ್ರ ಸರ್ಕಾರ ಸಹ 95 ಸಾವಿರ ರೂ. ಹಣ ನಿಗದಿ ಮಾಡಿದ್ದು ಇದರಿಂದ ಮನೆ ಕಟ್ಟಿಕೊಳ್ಳುವುದು ಕಷ್ಟವಾಗುವುದರಿಂದ ಉದ್ಯೋಗ ಖಾತ್ರಿಗೆ ಒಳಪಡಿಸಿದರೆ ಸಹಕಾರಿಯಾಗುವುದೆಂದರು.
