ಭಾರಿ ಮಳೆಯಿಂದ ಮನೆಗೆ ನುಗ್ಗಿದ ನೀರು ; ನಗರಸಭೆ ಅಧ್ಯಕ್ಷರಿಂದ ಪರಿಶೀಲನೆ

0
444

ಚಿಕ್ಕಮಗಳೂರು: ಕಳೆದ ಬುಧವಾರ ರಾತ್ರಿ ಸುರಿದ ಧಾರಾಕಾರ ಸುರಿದ ವರ್ಷಧಾರೆಯಿಂದಾಗಿ ನಗರದ ಕೆಲವೆಡೆ ರಸ್ತೆ-ಚರಂಡಿಗಳು, ನೀರಿನಿಂದ ಆವೃತ್ತವಾಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ನಗರದ ಕೆಲವು ವಾರ್ಡ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನತೆ ಯಾತನೆ ಪಡುವ ಸ್ಥಿತಿ ನಿರ್ಮಾಣವಾಯಿತು.

ಈ ಹಿನ್ನಲೆ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಸ್ಥಳಗಳಿಗೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಗುರುವಾರ ಬೆಳ್ಳಂಬೆಳಗ್ಗೆ ಅಧಿಕಾರಿ, ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ನಗರದ ಟಿಪ್ಪುನಗರ, ಶಂಕರಪುರ, ಉಪ್ಪಳ್ಳಿ, ಉಂಡೇದಾಸರಹಳ್ಳಿ, ಮತ್ತಿತರ ಕಡೆಗಳಲ್ಲಿ ತೆರಳಿ ಮಳೆಯಿಂದಾಗಿರುವ ಅನಾಹುತಗಳ ಬಗ್ಗೆ ಪರಿಶೀಲಿಸಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹಾನಿ ವೀಕ್ಷಣೆ ಕುರಿತು ಮಾತನಾಡಿದ ಅವರು ನಗರದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಹಾನಿಯ ಬಗ್ಗೆ ಪರಿಶೀಲನೆ ಕೈಗೊಳ್ಳಲಾಗಿದೆ. ಉಪ್ಪಳ್ಳಿಯಲ್ಲಿ ಮನೆಯ ಗೋಡೆಯೊಂದು ಕುಸಿದಿದ್ದು ಟಿಪ್ಪು ನಗರದಲ್ಲಿನ ಕೆಲವು ಮನೆಗಳಿಗೆ ನುಗ್ಗಿದೆ. ಇಲ್ಲಿನ ಸಮಸ್ಯೆಗಳ ಕುರಿತು ಅವಲೋಕಿಸಿದ್ದು ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಕೆಲವೆಡೆ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದ ಕಾರಣ ಮನೆಗಳಿಗೆ ನುಗ್ಗಿದೆ, ಮಳೆಗಾಲ ಆರಂಭವಾಗುವ ಮುನ್ನವೇ ಸಮಸ್ಯೆಗಳ ಅರಿವು ಗಮನಕ್ಕೆ ಬಂದಿದ್ದು ಬಜೆಟ್‍ನಲ್ಲಿ ಆ ವಾರ್ಡ್‍ಗಳ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲು ಸಹಕಾರಿಯಾಗಲಿದೆ ಎಂದರು.

ನಗರಸಭೆಬಜೆಟ್ ಕುರಿತು ಜನಪರವಾದ ಮಾದರಿ ಬಜೆಟ್ ಘೋಷಣೆ ಮಾಡಲಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಇರಲಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಎ. ಸಿ. ಕುಮಾರ್ ಮಾತನಾಡಿ ಅಕಾಲಿಕ ಮಳೆಯಿಂದಾಗಿ ಉಪ್ಪಳ್ಳಿ ಸೇರಿದಂತೆ ವಿವಿದೆಡೆ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿದೆ. ನಗರದಲ್ಲಿ ಕೆ. ಎಂ ರಸ್ತೆಯಲ್ಲಿ ಚಾನೆಲ್ ದುರಸ್ಥಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆಲ್ಲ ಹರಿದು ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದ್ದು ಕುಟುಂಬಗಳಿಗೆ ಹಾನಿ ಪ್ರಮಾಣ ಆಧರಿಸಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸದಸ್ಯೆ ರೂಪಾಕುಮಾರ್ ಮಾತನಾಡಿ ಕೆಲವೆಡೆ ಚರಂಡಿಯ ನೀರು ಮನೆಗೆ ನುಗ್ಗಿದೆ, ರಾಜಕಾಲುವೆಯಲ್ಲಿ ತ್ಯಾಜ್ಯ ಮತ್ತಿತರ ವಸ್ತುಗಳು ಸಿಕ್ಕಿಹಾಕಿಕೊಂಡು ಮನೆಗಳಿಗೆ ನೀರು ನುಗ್ಗಿದೆ. ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಎಇಇ ಕುಮಾರ್, ಆರೋಗ್ಯ ಪರಿವೀಕ್ಷಕ ರಂಗಪ್ಪ, ಸದಸ್ಯರಾದ ಜಾವೀದ್, ಗೋಪಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here