ಭಾರಿ ಮಳೆ ; ಈ ವರ್ಷದಲ್ಲಿ 2ನೇ ಬಾರಿ ಮುಳುಗಡೆಯಾದ ಹೆಬ್ಬಾಳೆ ಸೇತುವೆ‌ !

0
259

ಕಳಸ: ಕುದುರೆಮುಖ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಭದ್ರಾ ನದಿ ಹರಿವು ಏರಿಕೆಯಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

ಹೊರನಾಡು-ಕಳಸ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿರುವ ಈ ಸೇತುವೆ ಮುಳುಗಡೆಯಿಂದಾಗಿ ಪರ್ಯಾಯ ಮಾರ್ಗವಾಗಿ ಹಳ್ಳುವಳ್ಳಿ ಕಡೆಯಿಂದ ವಾಹನಗಳು ಸಂಚರಿಸುತ್ತಿವೆ.

ಭಾರಿ ಮಳೆಗೆ ಈ ಸೇತುವೆ ಇದೇ ವರ್ಷದಲ್ಲಿ ಎರಡನೇ ಬಾರಿ ಮುಳುಗಡೆಯಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here