ಭಾರೀ ಮಳೆಗೆ ಸೇತುವೆ ಕುಸಿತ: ರಸ್ತೆ ಸಂಪರ್ಕ ಕಡಿತಗೊಳ್ಳುವ ಸಂಭವ !

0
3962

ಎನ್.ಆರ್.ಪುರ: ಕಳಸ – ಬಾಳೆಹೊನ್ನೂರು ನಡುವಿನ ಮಹಾಲ್‌ಗೋಡಿನಲ್ಲಿ ಕಿರು ಸೇತುವೆಗೆ ಅಳವಡಿಸಿದ್ದ ಪೈಪ್ ಪಕ್ಕದ ಮರಳಿನ ಮೂಟೆಗಳು ಭಾರಿ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ರಸ್ತೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.

ಮುಖ್ಯ ರಸ್ತೆಯಲ್ಲಿರುವ ಮೋರಿ ಎರಡು ವಾರದ ಹಿಂದೆ ಭಾರಿ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ತಕ್ಷಣ ಎಚ್ಚೆತ್ತ ಮೂಡಿಗೆರೆ ವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ತಾತ್ಕಾಲಿಕವಾಗಿ ಪೈಪ್ ಅಳವಡಿಸಿ ಹೋಗಿದ್ದರು. ನಂತರ ಮತ್ತೆ ಸುರಿದ ಮಳೆಗೆ ಆ ಮೋರಿ ಕೂಡ ಕೊಚ್ಚಿಕೊಂಡು ಹೋಗಿ ಕಳಸ-ಬಾಳೆಹೊನ್ನೂರು ನಡುವಿನ ಸಂಚಾರ ಸ್ಥಗಿತಗೊಂಡಿತ್ತು.

ಮತ್ತೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೋರಿಗೆ ಹೆಚ್ಚುವರಿಯಾಗಿ ಮೂರು ದೊಡ್ಡ ಪೈಪ್ ಗಳನ್ನು ಅಳವಡಿಸಿ ಅವುಗಳ ಪಕ್ಕದಲ್ಲಿ ಮರಳಿನ ಮೂಟೆಗಳನ್ನು ಇಟ್ಟಿದ್ದರು. ಸೋಮವಾರ ಸುರಿದ ಭಾರಿ ಮಳೆಗೆ ಪೈಪ್ ಬುಡದಲ್ಲಿ ಇಟ್ಟಿದ್ದ ಮರಳಿನ ಮೂಟೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇನ್ನೆರಡು ದಿನ ಇದೇ ರೀತಿ ಮಳೆ ಸುರಿದಲ್ಲಿ ಮತ್ತೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಉಂಟಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here