ಚಿಕ್ಕಮಗಳೂರು: ಭೂ ಕಾಯ್ದೆ ತಿದ್ದುಪಡಿ ಮೂಲಕ ಕಾಫಿ ಬೆಳೆಗಾರರನ್ನು ಭೂಗಳ್ಳರೆಂಬ ಹಣೆಪಟ್ಟಿಯಿಂದ ಶೀಘ್ರದಲ್ಲೆ ಮುಕ್ತಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಗ್ರೋವರ್ಫೆಡರೇಷನ್, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಬೆಳೆಗಾರರ ಒಕ್ಕೂಟ ಹಮ್ಮಿಕೊಂಡಿದ್ದ ಕಾಫಿ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಕಳೆದ 50 ರಿಂದ 70 ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಉಳಿಮೆಮಾಡಿಕೊಂಡು ಬಂದಿದ್ದು, ಸಕ್ರಮವಾಗಿಲ್ಲ, 10-30 ವರ್ಷಗಳವರೆಗೆ ಒತ್ತುವರಿ ಭೂಮಿ ಗುತ್ತಿಗೆ ನೀಡಬೇಕೆಂಬ ಬೇಡಿಕೆ ಸರ್ಕಾರದ ಮುಂದಿಡಲಾಗಿದೆ. ಬೆಳೆಗಾರರ ಮೆಚ್ಚಿಕೊಳ್ಳುವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬೆಳೆಗಾರರ ನೋವಿನ ದನಿಕೇಳಲು ಇಲ್ಲಿಗೆ ಬಂದಿದ್ದೇನೆ. ನಿನ್ನೆ ಹಾಸನದಲ್ಲಿ ಸಮಸ್ಯೆ ಕೇಳಿದ್ದೇನೆ, ಇಂದು ಚಿಕ್ಕಮಗಳೂರಿಗೆ ಭೇಟಿನೀಡಿದ್ದೇನೆ. ಕೊಡಗು ಜಿಲ್ಲೆಗೂ ತೆರಳಿ ಬೆಳೆಗಾರರ ಸಮಸ್ಯೆ ಆಲಿಸುತ್ತೇನೆ. 10 ಗುಂಟೆಯಿಂದ ಹಿಡಿದು 10-15 ಎಕರೆವರೆಗೆ ಸಣ್ಣ ಬೆಳೆಗಾರರ ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವು ಕಂಪನಿ ಎಸ್ಟೇಟ್ಗಳಲ್ಲಿ ನೂರಾರು ಎಕರೆ ಒತ್ತುವರಿಯಾಗಿದೆ. ಜೀವನಕ್ಕೆ ಒತ್ತುವರಿ ಮಾಡಿಕೊಂಡವರಿಗೆ ಭೂಗಳ್ಳರೆಂಬ ಹಣೆಪಟ್ಟಿಯನ್ನು ಕಳಚಲು ಇಂದಿನಿಂದಲೇ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮಲೆನಾಡು ಭಾಗದ ಶಾಸಕರ ಮನವಿ ಮೇರೆಗೆ ಕಂದಾಯ ಇಲಾಖೆಯಲ್ಲಿರುವ ಒತ್ತುವರಿಗೆ ಸಂಬಂಧಿಸಿದ ಅರ್ಜಿಯನ್ನು ನೋಡಿದಾಗ ಕೆಲವು ಅರ್ಜಿಗಳಿಗೆ ಅವಸಾನದ ಅಂಚನ್ನು ತಲುಪಿದ್ದವು. ಅವುಗಳನ್ನೆಲ್ಲ ಪರಿಶೀಲಿಸಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒತ್ತುವರಿಯನ್ನು ಎಕರೆಯ ಮೇಲೆ (ಸ್ಲ್ಯಾಬ್)ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
Related