ಭೂತದ ಬಂಗಲೆಯಂತಾಗಿರುವ ಹೊಸನಗರದ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್: ಬೃಂದಾವನ ಪ್ರವೀಣ್ ಗಂಭೀರ ಆರೋಪ

0
2674

ಹೊಸನಗರ: ಪಟ್ಟಣದ ಪ್ರತಿಷ್ಠಿತ ಕಾಲೇಜ್ ಎಂದು ಹೆಸರು ಮಾಡಿದ್ದ ಹೊಸನಗರದ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್ ಈಗ ಭೂತದ ಬಂಗಲೆಯಾಗಿ ಹಾಳು ಬಿದ್ದಿದೆ ಎಂದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯೆ ದಿವ್ಯಾ ಪ್ರವೀಣ್‌ರವರ ಪತಿ ಬೃಂದಾವನ ಪ್ರವೀಣ್‌ರವರು ಗಂಭೀರವಾಗಿ ಆರೋಪಿಸಿದ್ದಾರೆ.

ಸುಮಾರು 15 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾಲೇಜ್ ವಾತಾವರಣವಿದ್ದು ಇತ್ತಿಚಿನ ದಿನದಲ್ಲಿ ಪಾಳು ಕೊಂಪೆಯಾಗಿ ಕಾಣುತ್ತಿದೆ. ಹಿಂದಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಚಂದ್ರಶೇಖರ್ ಹೊಸನಗರದವರೇ ಆದಾ ಮಾರ್ಷಲ್ ಶಾರಾಂರವರು ಆಡಳಿತ ನಡೆಸಿ ಇತ್ತಿಚೆಗೆ ಸೇವೆಯಿಂದ ನಿವೃತ್ತಿಯಾದ ನಂತರ ಕಾಲೇಜು ವಾತಾವರಣ ಕಳಪೆ ಮಟ್ಟದಲ್ಲಿದೆ ಎಂದು ಕಾಲೇಜಿನ ವಿರುದ್ಧ ದೂರಿದರು.

ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಸುಮಾರು ರೂ. ಒಂದು ಲಕ್ಷಕ್ಕಿಂತ ಹೆಚ್ಚು ಹಣದಲ್ಲಿ ಮರಗಳನ್ನು ಬೆಳೆಸಲು ಕಾಡು ಉಳಿಸಲು ಕಾಲೇಜಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಿಡಗಳನ್ನು ಬೆಳೆಸಿದ್ದು ಅದರೆ ಅರಣ್ಯ ಇಲಾಖೆಯ ಒಪ್ಪಿಗೆಯನ್ನು ಪಡೆಯದೇ ಹಾಗೂ ಗ್ರಾಮ ಪಂಚಾಯಿತಿಯ ಒಪ್ಪಿಗೆಯು ಪಡೆಯದೇ ಮುಂಭಾಗದಲ್ಲಿದ್ದ ಎರಡು ಕಾಡು ಬಾದಾಮಿ ಮರಗಳನ್ನು ಕಡಿದಿದ್ದಾರೆ ಎಂದು ಪ್ರಾಂಶುಪಾಲರ ವಿರುದ್ಧ ಆಪಾದಿಸಿದರು.

ಈ ಕಾಲೇಜು ಸುಣ್ಣ-ಬಣ್ಣಗಳನ್ನು ಕಾಣದೇ ವರ್ಷಗಳೇ ಕಳೆದಿದೆ. ಕಾಲೇಜಿನಲ್ಲಿ ಎರಡು ಎನ್.ಎಸ್.ಎಸ್ ಘಟಕಗಳಿದ್ದರೂ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ. ಈ ಕಾಲೇಜಿಗೆ ಇಲ್ಲಿನ ಅವ್ಯವಸ್ಥೆಯನ್ನು ಮನಗಂಡು ಲೋಕಯುಕ್ತದವರು ಬಂದು ತನಿಖೆ ನಡೆಸಿದ್ದಾರೆ.

ದಿನ ಪ್ರತಿಕೆಗೆ ಬೆಲೆಯಿಲ್ಲ:

ಎರಡು ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಹೊಸನಗರಕ್ಕೆ ಬರುವ ಎಲ್ಲ ದಿನ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳು ವಾರದ ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಎಲ್ಲ ಪ್ರತ್ರಿಕೆಗಳನ್ನು ತರಿಸುತ್ತಿದ್ದರು ಎರಡು ವರ್ಷಗಳಿಂದ ಈ ಕಾಲೇಜಿಗೆ ಯಾವುದೇ ಪತ್ರಿಕೆಯನ್ನು ತರಿಸುತ್ತಿಲ್ಲ ನಿಮ್ಮ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಬೇಡವೇ? ಎಂದು ಪ್ರಾಂಶುಪಾಲರನ್ನು ಕೇಳಿದರೆ ಕಂಪ್ಯೂಟರ್ ಇದೇ ಆನ್‌ಲೈನ್‌ನಲ್ಲಿ ನೋಡಿಕೊಳ್ಳುತ್ತಾರೆ ಎಂದು ಉತ್ತರ ನೀಡುತ್ತಿದ್ದಾರೆ ಸುಮಾರು ಸಾವಿರ ವಿದ್ಯಾರ್ಥಿಗಳಿಂದ ಗ್ರಂಥಾಲಯದ ಶುಲ್ಕ 100ರೂಪಾಯಿ ಪಡೆಯುತ್ತಿದ್ದರೂ ಯಾವುದೇ ಪತ್ರಿಕೆಯನ್ನು ತೆಗೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಗ್ರಂಥಾಲಯದ ಶುಲ್ಕ ಏನೂ ಮಾಡುತ್ತಾರೆ? ಎಂದು ತಿಳಿಯುತ್ತಿಲ್ಲ ಈ ಹಿಂದೆ ಕಾಗೋಡು ತಿಮ್ಮಪ್ಪನವರು ಶಾಸಕರು ಸಚಿವರಾಗಿದ್ದಾಗ 15ದಿನಕ್ಕೆ ಕಾಲೇಜಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದರು, ಆದರೆ ಈಗ ಕಾಲೇಜ್ ಬಗ್ಗೆ ಕಾಳಗಿ ವಹಿಸುವವರೇ ಇಲ್ಲವಾಗಿದೆ. ಇಂದಿನ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗುತ್ತಿದೆ ಹೀಗೆ ಮುಂದುವರೆದರೇ ಕಾಲೇಜ್ ಮುಳುಗುವುದರಲ್ಲಿ ಯಾವುದೇ ಅನುಮಾನವಿಲ್ಲ ತಕ್ಷಣ ಸಂಬಂಧಪಟ್ಟ ಇಲಾಖೆಯವರು ಹಾಗೂ ಶಾಸಕರು ಇತ್ತ ಹಮನ ಹರಿಸಿ ಈ ಕಾಲೇಜಿನ ಅವ್ಯವಸ್ಥೆಯನ್ನು ಸರಿ ಪಡಿಸಲಿ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here