ಭೋಗೇಶ್ವರ ಆನೆ ದಂತವನ್ನು ವಿಧಾನಸೌಧದಲ್ಲಿಟ್ಟು ಸಂರಕ್ಷಿಸುವಂತೆ ಸರ್ಕಾರಕ್ಕೆ ಬಿ. ಸ್ವಾಮಿರಾವ್ ಮನವಿ

0
316

ರಿಪ್ಪನ್‌ಪೇಟೆ: ಅಪರೂಪದಲ್ಲಿ ಅಪರೂಪವಾದ ಸುಮಾರು 8 ಅಡಿ ಉದ್ದದ ಭೋಗೇಶ್ವರ ಆನೆ ದಂತವೊಂದು ಸಿಕ್ಕಿದ್ದು ಅದನ್ನು ರಾಜ್ಯದ ಪ್ರತಿಷ್ಟಿತ ಯೋಗ್ಯ ಕಟ್ಟವಾದ ವಿಧಾನಸೌಧದಲ್ಲಿ ಇಟ್ಟು ಸಂರಕ್ಷಿಸುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮತ್ತು ಅರಣ್ಯ ಸಚಿವರಿಗೆ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಬಿ.ಸ್ವಾಮಿರಾವ್ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ‘ಮಲ್ನಾಡ್ ಟೈಮ್ಸ್’ ಜೊತೆ ಮಾತನಾಡಿ, 1983 ರಲ್ಲಿ ಹೀಗೆಯೆ ಸುಮಾರು 7 ಅಡಿ ಉದ್ದದ ಆನೆ ದಂತ ಸಿಕ್ಕಿರುವ ಬಗ್ಗೆ ಸುದ್ದಿಯಾಗಿದ್ದು ಅಂದಿನ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆಕೇಳಲಾಗಿ ಆ ಸಂದರ್ಭದಲ್ಲಿ ಅರಣ್ಯ ಸಚಿವ ಬಿ.ರಾಚಯ್ಯನವರು ವಿಧಾನಸೌಧದಲ್ಲಿಟ್ಟು ಸಂರಕ್ಷಿಸುವುದಾಗಿ ಭರವಸೆ ನೀಡಿದರು.

ನಂತರದಲ್ಲಿ ಭರವಸೆಯಾಗಿಯೇ ಉಳಿದಿದ್ದ ಆನೆ ದಂತದ ಬಗ್ಗೆ ಎರಡನೇ ಭಾರಿಗೆ ಚುನಾವಣೆಯಲ್ಲಿ ಮರು ಆಯ್ಕೆಯಾದಾಗ ಪುನಃ ಕಸದ ಬುಟ್ಟಿ ಸೇರಿದ ವಿಷಯವನ್ನು ಪ್ರಸ್ತಾಪ ಮಾಡಿದ್ದಾಗ ಸರ್ಕಾರದಿಂದ ಬಂದ ಉತ್ತರ ಆನೆ ದಂತ ಇರುವುದು ಹೌದು ಆದರೆ ಮೂರು ಅಡಿ ಇದೆ ಎಂದಾಗ ನಾನು ಪ್ರತಿಭಟಿಸದೆ ಸುಮ್ಮನಾಗಬೇಕಾಯಿತು.

ನಾನು ಕೆಲವು ವರ್ಷಗಳ ಬಳಿಕೆ ಅಮೇರಿಕಾ ದೇಶಕ್ಕೆ ಹೋಗಿದ್ದೆ ಅಮೇರಿಕಾ ದೇಶದ ಸಬ್ರಿಸಾ (ರಾಜ್ಯ)ದ ಮೂಸಿಯಂನಲ್ಲಿ ಹನ್ನೆರಡು ಅಡಿ ಉದ್ದದ ಆನೆ ದಂತವನ್ನು ಕಂಡು ಆಶ್ಚರ್ಯ ಚಕಿತನನ್ನಾಗಿಸಿತು ನಾನು ಕೇಳಿದಂತೆ ನೋಡಿದಂತೆ 7 ಅಡಿ ಉದ್ದ ಹೆಚ್ಚು ಎಂದು ಭಾವಿಸಿದ್ದ ನನಗೆ 12 ಅಡಿ ದಂತ ನೋಡಿದವನಿಗೆ ಈಗ ರಾಜ್ಯದಲ್ಲಿ ಭೋಗೇಶ್ವರ ಹೆಸರಿನ 8 ಅಡಿ ಉದ್ದ ಇರುವ ಆನೆದಂತ ಸಿಕ್ಕಿರುವುದನ್ನು ಕೇಳಿ ಸಂತಸವಾಯಿತು. ಈ ದಂತ ಇನ್ನೆಷ್ಟು ದಿವಸದಲ್ಲಿ ಅತ್ಯಂತ ಗರಿಷ್ಟ ಅಳತೆ ಬರಬಹುದು ಎಂದು ಸಂಬಂಧಪಟ್ಟ ಇಲಾಖೆಯವರನ್ನು ಪ್ರಶ್ನಿಸಿದ್ದಾರೆ.

ಈ ಹಿಂದೆ 7 ಅಡಿ ಉದ್ದದ ದಂತ ಯಾರು ಯಾವ ಅಧಿಕಾರಿ ಜವಾಬ್ದಾರಿಯಿಂದ ಆನೆದಂತವನ್ನು ಹೇಗೆ ಸಂರಕ್ಷಣೆ ಮಾಡಿದನೋ ಗೊತ್ತಿಲ್ಲ ಈ ಬಗ್ಗೆ ಇಂದಿನ ರಾಜ್ಯ ಸರ್ಕಾರ ಸಂಪೂರ್ಣವಾಗಿ ತನಿಖೆ ನಡೆಸಿದಲ್ಲಿ ಈ ಹಿಂದಿನ 7 ಅಡಿ ಉದ್ದದ ಆನೆ ದಂತ ಪತ್ತೆಯಾಗುವುದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ ಈಗ ಸಿಕ್ಕಿರುವ 8 ಅಡಿ ಉದ್ದದ ಭೋಗೇಶ್ವರ ಆನೆ ದಂತವನ್ನು ರಾಜ್ಯ ಸರ್ಕಾರ ಸಂರಕ್ಷಣೆ ಮಾಡುವ ಮೂಲಕ ವಿಧಾನಸೌಧದಲ್ಲಿ ಇಟ್ಟು ಮೂಂದಿನ ಯುವ ಪೀಳಿಗೆಗೆ ಪರಿಚಯಿಸಲು ಅನುಕೂಲವಾಗುವುದೆಂದು ವಿವರಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅರಣ್ಯ ಸಚಿವರಿಗೆ ಪತ್ರ ಬರೆದಿರುವುದಾಗಿ ವಿವರಿಸಿದ ಮಾಜಿ ಶಾಸಕ ಬಿ.ಸ್ವಾಮಿರಾವ್, ಇದೊಂದು ದಂತ ಕಥೆಯಾಗದೆ ಯುವ ಪೀಳಿಗೆಗೆ ಪರಿಚಯಿಸುವ ಮಹಾತ್ಕಾರ್ಯವಾಗಲೆಂದು ಸಲಹೆ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here