23.2 C
Shimoga
Sunday, November 27, 2022

ಭ. ಶ್ರೀ ಮಹಾವೀರ ಸ್ವಾಮಿಯ 2549ನೇ ನಿರ್ವಾಣೋತ್ಸವ |
“ಜ್ಞಾನಜ್ಯೋತಿಯ ಮೂಲಕ ಲೋಕವನ್ನು ಬೆಳಗಿದವರು ಮಹಾವೀರರು” ; ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ: ಮಹಾವೀರರಂತಹ ಮಹಾಪುರುಷರು ತಮ್ಮ ಜ್ಞಾನಜ್ಯೋತಿ ಮೂಲಕ ಲೋಕವನ್ನು ಬೆಳಗಿಸಿದರು ಎಂದು ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಹೇಳಿದರು.

ಹೊಂಬುಜ ಜೈನ ಮಠದಲ್ಲಿ ಇಂದು ನಡೆದ ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2549ನೇ ಮೋಕ್ಷಕಲ್ಯಾಣ ದಿವ್ಯ ಸ್ಮರಣೆಯಲ್ಲಿ ಮಹಾವೀರ ಸ್ವಾಮಿಗೆ ನಿರ್ವಾಣ ಲಾಡು ಅರ್ಪಿಸಿ ಆಶೀರ್ವಚನ ನೀಡಿದರು.


ಪ್ರತಿಯೊಬ್ಬ ಮನುಷ್ಯನಲ್ಲಿ ಬದುಕಿನ ಸ್ಥಿತಿ, ಗತಿ ಮೀರಿದ ಮನಸ್ಸಿದೆ. ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸಗಳಿಂದ ಪ್ರತಿಯೊಬ್ಬರು ಜೀವಿಸಬೇಕು. ಬಡತನ ಇರಲಿ, ಸಿರಿತನ ಇರಲಿ ನಮ್ಮ ಬದುಕನ್ನು ಸ್ವರ್ಗವಾಗಿಸುವುದು, ನರಕವಾಗಿಸುವುದು ನಮ್ಮ ಕೈಯಲ್ಲಿದೆ. ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸಗಳಿಂದ ಪ್ರತಿಯೊಬ್ಬರೂ ಮುಗ್ದ ಮನಸ್ಸಿನ ಮಕ್ಕಳಂತೆ ಜೀವಿಸಬೇಕು ಎಂದರು.


ಅಂದು ಬೆಳಗಿನ ಜಾವ ಭಗವಾನ್ ಶ್ರೀಮಹಾವೀರ ಸ್ವಾಮಿಗೆ ಪಂಚಾಮೃತ ಅಭಿಷೇಕ ಪೂಜೆ ಮತ್ತು ನಿರ್ವಾಣ ಲಾಡು ಅರ್ಪಿಸಿ ಭಗವಾನ್ ಮಹಾವೀರ ಸ್ವಾಮಿಯ 2549ನೇ ಮೋಕ್ಷಕಲ್ಯಾಣ ದಿವ್ಯ ಸ್ಮರಣೆ ಮಾಡಲಾಯಿತು. ರಾಜ್ಯ, ಹೊರರಾಜ್ಯ ಹಾಗೂ ಊರಿನ ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!