ಮಂಜುನಾಥನ ಸನ್ನಿಧಿಗೆ ತೆರಳಿ ಆಣೆ ಪ್ರಮಾಣ ಮಾಡಿದ ಶಾಸಕ ಹರತಾಳು ಹಾಲಪ್ಪ !

0
972

ಸಾಗರ: ರಾಜಕೀಯ ರಂಗದಲ್ಲಿ ಮತ್ತೆ ಆಣೆ-ಪ್ರಮಾಣದ ವಿಚಾರಗಳು ಸದ್ದು ಮಾಡ್ತಿವೆ. ಸಾಗರ ವಿಧನಾಸಭಾ ಕ್ಷೇತ್ರದಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಲಾರಿ ಮಾಲೀಕರಿಂದ ಹರತಾಳು ಹಾಲಪ್ಪ ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದರು. ಈ ಸಂಬಂಧ ಆಣೆ-ಪ್ರಮಾಣ ಮಾಡಲು ಹರತಾಳು ಹಾಲಪ್ಪ ಧರ್ಮಸ್ಥಳಕ್ಕೆ ಆಗಮಿಸಿ ಪ್ರಮಾಣ ಮಾಡಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ತಾಕತ್ತಿದ್ದರೆ ಹಾಲಪ್ಪನವರು ಕಮಿಷನ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಬೇಳೂರು ಗೋಪಾಲಕೃಷ್ಣ ಸವಾಲು ಹಾಕಿದ್ದರು. ಇದಕ್ಕೆ ನಾನು ಯಾವುದೇ ಕಮಿಷನ್ ಪಡೆದಿಲ್ಲ. ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸಾಗರ ಬಿಜೆಪಿ ಶಾಸಕ ಹರತಾಳು ಹಾಲಪ್ಪ ತಿರುಗೇಟು ನೀಡಿದ್ದರು. ಜೊತೆಗೆ ಆಣೆ-ಪ್ರಮಾಣಕ್ಕೆ ಇಂದು ಸಮಯ ನಿಗದಿ ಮಾಡಲಾಗಿತ್ತು.

ಅದರಂತೆ ಇಂದು ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿರುವ ಶಾಸಕ ಹಾಲಪ್ಪ, ಶ್ರೀ ಮಂಜುನಾಥನ ದರ್ಶನ ಪಡೆದು ಆಣೆ-ಪ್ರಮಾಣ ಮಾಡಿದ್ದಾರೆ. ಮರಳು ಮಾಫಿಯಾದಿಂದ ತಾವಾಗಲಿ, ತಮ್ಮ ಸಂಗಡಿಗರಾಗಲಿ ಕಮಿಷನ್ ಪಡೆದಿಲ್ಲ ಎಂದು ತಮ್ಮ ಆಪ್ತರಾದ ವಿನಾಯಕ್ ರಾವ್ ಹಾಗೂ ಬಿ.ಟಿ.ರವೀಂದ್ರ ಅವರೊಂದಿಗೆ ಆಣೆ ಪ್ರಮಾಣ ಮಾಡಿದ್ದಾರೆ.

ವಿನಾಕಾರಣ ನನ್ನ ಮೇಲೆ ಬೇಳೂರು ಗೋಪಾಲಕೃಷ್ಣ ಆರೋಪ ಮಾಡುತ್ತಿದ್ದಾರೆ. ಆಣೆ ಪ್ರಮಾಣದ ಸವಾಲು ಹಾಕಿ ಈಗ ಪಲಾಯನ ಮಾಡುತ್ತಿದ್ದಾರೆ. ಈಗ ಗೋವಾ ಚುನಾವಣೆಯ ಸಬೂಬು ಹೇಳ್ತಾ ಇದ್ದಾರೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ದೇವರೆದುರು ನಾನು ಆಣೆ ಪ್ರಮಾಣ ಮಾಡಿದ್ದೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕ ಹಾಲಪ್ಪ ಹೇಳಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here