ಮಕ್ಕಳನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ಜೂ.12 ರಂದು ಬಾಲ ಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ: ಡಾ. ದೇವರಾಜ್ ವೈ

0
168

ಶಿಕಾರಿಪುರ: ಕಾರ್ಖಾನೆಗಳು, ಹೋಟೆಲ್, ಇತ್ಯಾದಿ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಲಕಾರ್ಮಿಕರನ್ನು ಮುಕ್ತ ಮಾಡಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಅಲ್ಲದೇ, ಪ್ರಪಂಚದಾದ್ಯಂತ ಬಾಲಕಾರ್ಮಿಕತೆಯಲ್ಲಿ ಪೋಷಕರು ಬಲವಂತವಾಗಿ ಮಕ್ಕಳನ್ನು ಸೇರಿಸುವುದನ್ನು ತಡೆಗಟ್ಟಬೇಕು ಎಂದು ಸಮಾಜ ವಿಜ್ಞಾನ ಸಂಘದ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರಾದ ಡಾ.ದೇವರಾಜ್ ವೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ‘ಸಮಾಜ ವಿಜ್ಞಾನ ಸಂಘದ’ ಅಡಿಯಲ್ಲಿ ‘ಮಕ್ಕಳ ಹಕ್ಕು ಕಾಯ್ದೆ’ಗೆ ಅನುಗುಣವಾಗಿ “ಬಾಲಕಾರ್ಮಿಕ ವಿರೋಧಿ ದಿನ” ಅಭಿಯಾನವನ್ನು ತಿಮ್ಲಾಪುರ ಗ್ರಾಮದಲ್ಲಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿವರ್ಷ ಜೂನ್ 12ರಂದು ಮಕ್ಕಳ ಹಕ್ಕು ಕಾಯ್ದೆಗೆ ಅನುಗುಣವಾಗಿ ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ಜೂನ್ 12 ರಂದು ‘ಬಾಲ ಕಾರ್ಮಿಕ ವಿರೋಧಿ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ಬಾಲ ಕಾರ್ಮಿಕರ ಮೇಲಿನ ಬಿಕ್ಕಟ್ಟಿನ ಪರಿಣಾಮವನ್ನು ತೊಡೆದು ಹಾಕಬೇಕು ಈ ಆತಂಕಕಾರಿ ಪರಿಸ್ಥಿತಿಗೆ ಕಡಿವಾಣ ಹಾಕಬೇಕೆಂದರು.

ಬಾಲಕಾರ್ಮಿಕರ ಸಮಸ್ಯೆಗಳನ್ನು ಅರಿತು ಶಿಕ್ಷಕರು ಹಾಗೂ ಸಮಾಜದಲ್ಲಿರುವ ಪ್ರತಿಯೊಬ್ಬರೂ ಸ್ಪಂದಿಸಬೇಕು. ಕಾರ್ಖಾನೆಗಳು, ಹೋಟೆಲ್, ಇತ್ಯಾದಿ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಲಕಾರ್ಮಿಕರನ್ನು ಮುಕ್ತ ಮಾಡಲು ಮಾರ್ಗಗಳನ್ನು ಕಂಡುಕೊಳ್ಳಬೇಕು ಅಲ್ಲದೇ, ಪ್ರಪಂಚದಾದ್ಯಂತ ಬಾಲಕಾರ್ಮಿಕತೆಯಲ್ಲಿ ಪೋಷಕರು ಬಲವಂತವಾಗಿ ಮಕ್ಕಳನ್ನು ಸೇರಿಸುವುದನ್ನು ತಡೆಗಟ್ಟಲು ಮುಂದಾಗುವಂತೆ ತಿಳಿಸಿದರು.

ಮಕ್ಕಳು ಎದುರಿಸುತ್ತಿರುವ ಹಾನಿಕಾರಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಜೊತೆಗೆ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಪೋಷಕರು, ಮಕ್ಕಳು, ಹಾಗೂ ಸಮಾಜದಲ್ಲಿ ಎಲ್ಲರಿಗೂ ಜಾಗೃತಿ ಮೂಡಿಸುವ ಅಂಗವಾಗಿ ತಿಮ್ಲಾಪುರ ಗ್ರಾಮದಲ್ಲಿ ಘೋಷಣೆಗಳನ್ನು ಹೇಳುತ್ತಾ, ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಇದು ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಹಂತಹಂತವಾಗಿ ಅನ್ಯಾಯಕ್ಕೊಳಗಾಗುವ ಶಾಲೆಯ ಶಿಕ್ಷಣದಿಂದ ವಂಚಿತವಾದವರ ಸಂಖ್ಯೆಯನ್ನು ಇಳಿಸುವಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಾಗುತ್ತದೆ ಎಂಬ ಆಶಯ ವ್ಯಕ್ತ ಪಡಿಸಿದರು.

ಈ ಅಭಿಯಾನ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಸಂಘದ ಇನ್ನೋರ್ವ ಸದಸ್ಯರಾದ ಡಾ. ವಾಣಿ ನಾಯಕಿ ಡಿ.ಸಿ, ಕಾಲೇಜಿನ ಎಲ್ಲ ಸಹಾಯಕ ಪ್ರಾಧ್ಯಾಪಕರು, ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.

ಜಾಹಿರಾತು

LEAVE A REPLY

Please enter your comment!
Please enter your name here