ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಸಂಸ್ಕಾರ ಅಗತ್ಯ ; ಮೂಲೆಗದ್ದೆ ಶ್ರೀಗಳು

0
274

ರಿಪ್ಪನ್‌ಪೇಟೆ : ಮಕ್ಕಳನ್ನು ಸುಸಂಸ್ಕೃತರಾನ್ನಾಗಿಸಲು ಗ್ರಾಮದ ಹಿರಿಯರು ಮತ್ತು ತಂದೆ-ತಾಯಿಯರು, ಪೋಷಕರು ಚಿಕ್ಕವರಿಗೆ ವಯಸ್ಸಿನಲ್ಲಿ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ವಡಗೆರೆ ಶ್ರೀ ತುಳಜಾ ಭವಾನಿ ಸೇವಾ ಸಮಿತಿಯವರು ಆಯೋಜಿಸಲಾಗಿದ್ದ ಐದನೇ ವರ್ಷದ ಶ್ರೀ ತುಳಜಾಭವಾನಿ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮದ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗ್ರಾಮಾಂತರ ಪ್ರದೇಶದಲ್ಲಿನ ವಡಗೆರೆಯಲ್ಲಿ ರಜಪೂತ ಜನಾಂಗದವರು ಕಡಿಮೆ ಇದ್ದರು ವಿದ್ಯಾಭ್ಯಾಸದಲ್ಲಿ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉನ್ನತ ಸಾಧನೆ ಮಾಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತುಳಜಾಭವಾನಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಟಿ.ಧರ್ಮಸಿಂಗ್ ವಹಿಸಿದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ, ಗ್ರಾ.ಪಂ.ಸದಸ್ಯರಾದ ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ಟಿ.ಸುಂದರೇಶ್, ಎನ್.ಚಂದ್ರೇಶ್, ಪಾರ್ವತಮ್ಮ, ಶಶಿಕಲಾ, ತಾ.ರ.ಅಧ್ಯಕ್ಷ ಎಂ.ಗಣೇಶ್‌ಸಿಂಗ್, ಜಿ.ರ.ಸಮಾಜದ ಉಪಾಧ್ಯಕ್ಷ ಎಂ.ಸುರೇಶ್‌ಸಿಂಗ್, ಜಿ.ರ.ನಿರ್ದೇಶಕ ಎಸ್.ಕೊಲ್ಲೂರ್‌ಸಿಂಗ್, ವೈ.ಸುರೇಶ್‌ಸಿಂಗ್ ಇನ್ನಿತರರು ಹಾಜರಿದ್ದರು.

ಇದೆ ಸಂದರ್ಭದಲ್ಲಿ ಸ್ಕೌಟ್ಸ್ & ಗೈಡ್ಸ್ ನಲ್ಲಿ ಸಾಧನೆ ಮಾಡಿದ ಆದಿತ್ಯಸಿಂಗ್ ಇವರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವರನ್ನು ಸನ್ಮಾನಿಸಲಾಯಿತು‌.

ಹರ್ಷಿತ ಅಜಿತ್ ಸಿಂಗ್ ಸ್ವಾಗತಿಸಿದರು. ವೈ. ಸುರೇಶ್ ಸಿಂಗ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here