ಮಕ್ಕಳಲ್ಲಿ ಅಚಲ ನಂಬಿಕೆ ಇದ್ದರೆ ಸಾಧನೆಗೆ ಸಹಕಾರಿ ; ಮೂಲೆಗದ್ದೆ ಶ್ರೀಗಳು

0
210

ರಿಪ್ಪನ್‌ಪೇಟೆ: ಮಕ್ಕಳಲ್ಲಿ ಶ್ರದ್ಧಾ ಭಾವನೆ ನಂಬಿಕೆ ಪ್ರೀತಿ ನಾನು ನನ್ನದು ಎಂಬ ಐದು ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಶ್ರೇಯಸ್ಸು ಲಭಿಸುವುದು ಎಂದು ಮೂಲೆಗದ್ದೆ ಮಠದ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ರಿಪ್ಪನ್‌ಪೇಟೆಯ ದಿ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾತಂಡದವರು ಆಯೋಜಿಸಲಾಗಿರುವ 15 ದಿನದ ಹಳ್ಳಿಮಕ್ಕಳ ರಂಗಹಬ್ಬದ ಶಿಬಿರಕ್ಕೆ ಭೇಟಿ ನೀಡಿ ಮಕ್ಕಳ ಕಲಾನೈಪುಣ್ಯತೆಯನ್ನು ವೀಕ್ಷಿಸಿ ಆಶೀರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಶಿಕ್ಷಣದ ಒತ್ತಡದಿಂದಾಗಿ ಮಕ್ಕಳಲ್ಲಿರುವ ಕಲಾ ಪ್ರತಿಭೆಗಳು ಹೊರತರಲು ಸಾಧ್ಯವಾಗುತ್ತಿಲ್ಲ ಆ ನಿಟ್ಟಿನಲ್ಲಿ ರಜಾ ದಿನಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಗಳಿಂದ ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಸಂಸ್ಕಾರಗಳಿಗೆ ಹೆಚ್ಚು ಪ್ರೋತ್ಸಾಹಿಸಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ. ಅಲ್ಲದೆ ಮಕ್ಕಳಲ್ಲಿ ಅಚಲ ನಂಬಿಕೆ ಇದ್ದರೆ ಸಾಧನೆಗೆ ಸಹಕಾರಿಯಾಗುವುದೆಂಬುದಕ್ಕೆ ಆಯೋಜಕರು ನಡೆಸುತ್ತಿರುವ ಇಂತಹ ಶಿಬಿರಗಳು ಅಗತ್ಯವಾಗಿವೆ. ಮುಂದಿನ ದಿನಮಾನಗಳಲ್ಲಿ ನಾವು ನಮ್ಮ ಮಠದಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್‌ನ ಸರ್ವಸಮ್ಮೇಳನದ ನಿಕಟಪೂರ್ವ ಸರ್ವಾಧ್ಯಕ್ಷೆ ಎಂ.ಡಿ.ಇಂದ್ರಮ್ಮ ಮತ್ತು ಗ್ರಾಮ ಪಂಚಾಯ್ತಿ ಸದಸ್ಯೆ ಅಶ್ವಿನಿ ರವಿಶಂಕರ್ ಉಪಸ್ಥಿತರಿದ್ದು ಮಾತನಾಡಿದರು.

ಶಿಬಿರಾರ್ಥಿಗಳಿಂದ ರಂಗಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿಬಿರದ ನಿರ್ದೇಶಕ ಗಣೇಶ್ ಆರ್.ಕೆಂಚನಾಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here