ಮಕ್ಕಳಲ್ಲಿ ಮತೀಯ ಭಾವನೆ ಬೆಳೆಸದೆ ಶಾಲೆಗಳು ಸುಸಂಸ್ಕೃತ ಕೇಂದ್ರಗಳಾಗಬೇಕು ; ಆರಗ ಜ್ಞಾನೇಂದ್ರ

0
227

ರಿಪ್ಪನ್‌ಪೇಟೆ: ಇಂಗ್ಲೀಷರ ಕಾಲದಲ್ಲಿಯೂ ಶಾಲೆಗಳಲ್ಲಿ ಮಕ್ಕಳಿಗೆ ಸಮಾನತೆ ಸಾರುವುದರೊಂದಿಗೆ ಸಮವಸ್ತ್ರವನ್ನು ಹಾಕಿಸಿ ಮಕ್ಕಳಲ್ಲಿ ಸಾಮರಸ್ಯದ ಭಾವನೆ ಬೆಳಸುತ್ತಿದ್ದರು, ಆದರೆ ಕಳೆದ 15-20 ದಿನಗಳಿಂದ ಹಿಜಾಬ್ ಧರಿಸುವಂತೆ ಪ್ರಚೋದನೆ ಮಾಡಿ ಮಕ್ಕಳ ಪರಿಶುದ್ದ ಮನಸ್ಸಿನಲ್ಲಿ ಮತೀಯ ಭಾವನೆ ಬೆಳೆಸಿ ಧರ್ಮವನ್ನು ಒಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಧಾನ ವ್ಯಕ್ತಪಡಿಸಿದರು.

ಹೆದ್ದಾರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿ ನಂತರ ಸುಮಾರು 16 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಯಾವುದೇ ಪ್ರಭಾವಕ್ಕೆ ಮನ್ನಣೆ ನೀಡದೆ ಜನರ ಸಂಕಷ್ಟ ಪರಿಹರಿಸುವ ಉದ್ದೇಶದಿಂದ ನನ್ನ ಆಯ್ಕೆ ಮಾಡಿದ್ದಾರೆ. ಅವರ ಸುಖ-ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಷ್ಟು ಒತ್ತಡಗಳಿದ್ದರೂ ಕ್ಷೇತ್ರದ ಮತದಾರರನ್ನು ನಾನು ಮರೆಯದೆ ದಿನದ 24 ಗಂಟೆಯು ನಾನು ಕೆಲಸ ಮಾಡುತ್ತಿದ್ದೇನೆ ಎಂದರು.

ಜನರ ಮಾನ ಪ್ರಾಣ ರಕ್ಷಿಸುವ ಮಹತ್ವದ ಖಾತೆಯನ್ನು ನನಗೆ ನೀಡಿದ್ದಾರೆ ಅದನ್ನು ಸಮರ್ಥವಾಗಿ ನಿರ್ವಹಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದ್ದು ಪಕ್ಷದ ಮತ್ತು ಜನತೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ಚ್ಯುತಿ ಬರದಂತೆ ನಿರ್ವಹಿಸುವುದಾಗಿ ಭರವಸೆ ನೀಡಿದರು.

ನಾವೇ ಮಕ್ಕಳ ಮುಗ್ದ ಮನಸ್ಸಿನಲ್ಲಿ ಮತೀಯ ಭಾವನೆ ಹುಟ್ಟುಹಾಕಿ ಧರ್ಮದಲ್ಲಿ ಅಶಾಂತಿಯನ್ನು ಬೆಳಸುವ ಕೆಲಸ ಮಾಡುತ್ತಿದ್ದಾರೆ ಅದನ್ನು ಮಟ್ಟಹಾಕುವ ಮೂಲಕ ಸೌಹಾರ್ಧತೆಯ ಸಾಮರಸ್ಯದ ಭಾವನೆ ಬೆಳೆಸಿ ಉತ್ತಮ ಸುಸಂಸ್ಕೃತರನ್ನಾಗಿ ಮಾಡಿ ಉತ್ತಮ ಸಪ್ರಜೆಯನ್ನಾಗಿಸುವ ಕಾರ್ಯ ಶಿಕ್ಷಕರು ಮತ್ತು ಪೋಷಕರದಾಗಬೇಕು ಆಗ ದೇಶ ಸಮಾಜ ಸಂಘಟನೆಯೊಂದಿಗೆ ಶಾಂತಿ ಸಾಮರಸ್ಯದಿಂದಿರಲೂ ಸಾಧ್ಯವೆಂದರು.

ಶಾಲಾ ಸಮವಸ್ತ್ರದಿಂದ ಬಡವ ಶ್ರೀಮಂತ ದಲಿತ ಹೀಗೆ ಬೇದ-ಭಾವನೆ ಬೆಳಸದೆ ಎಲ್ಲರಲ್ಲೂ ಸಮಾನತೆಯಿಂದ ಇರಲು ಶಾಲಾ ಸಮವಸ್ತ್ರ ಧರಿಸುವುದು ಅಗತ್ಯವಾಗಿದೆ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವನಿತಾ ಗಂಗಾಧರ, ಉಪಾಧ್ಯಕ್ಷೆ ಲೀಲಾವತಿ ಪುಂಡಲೀಕ್, ಸದಸ್ಯರಾದ ನಾಗರತ್ನ, ಸುಮಿತ್ರ, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಕಲ್ಲೂರು ಮೇಘರಾಜ್, ತಹಶೀಲ್ದಾರ್ ವಿ.ಎಸ್. ರಾಜೀವ್, ಇಓ ಪ್ರವೀಣ್, ಬಿಇಓ ವೀರಭದ್ರಪ್ಪ, ವಿಶುಕುಮಾರ್, ಗುರುರಾಜ, ಲಿಂಗರಾಜ್, ಪುಟ್ಟಪ್ಪ, ತೇಜ್‌ಮೂರ್ತಿ, ಸತೀಶ್‌ಭಟ್, ರಾಮಣ್ಣ ಹೆದ್ದಾರಿಪುರ, ಜಂಬಳ್ಳಿ ಕಮಲಾಕ್ಷ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here