‘ಮಕ್ಕಳಲ್ಲಿ ಮಾನವೀಯತೆ ಬೆಳೆಸಲು ರಂಗ ತರಬೇತಿ ಸಹಕಾರಿ’ ; ನಿನಾಸಂ ರಂಗ ನಿರ್ದೇಶಕ, ನಟ ಏಸುಪ್ರಕಾಶ್

0
422

ರಿಪ್ಪನ್‌ಪೇಟೆ: ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳಸುವುದರೊಂದಿಗೆ ಮಾನವೀಯತೆಯನ್ನು ಬೆಳಸಲು ರಂಗಕಲೆ ಸಹಕಾರಿಯಾಗಿದೆ. ಪಠ್ಯದಲ್ಲಿ ಮಕ್ಕಳು ಬೌದ್ದಿಕ ಮಟ್ಟ ಹೆಚ್ಚಾಗುವುದಿಲ್ಲ ಅವರಲ್ಲಿ ಪಠ್ಯೇತರ ಚಟುವಟಿಕೆಯ ಮೂಲಕ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಇಂತಹ ಶಿಬಿರಗಳ ಅಗತ್ಯವಿದೆ ಎಂದು ನಿನಾಸಂ ರಂಗ ನಿರ್ದೇಶಕ ನಟ ಏಸುಪ್ರಕಾಶ್ ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ದಿ.ಎಂ.ಕೆ.ರೇಣುಕಪ್ಪ ಪ್ರತಿಷ್ಠಾನದವರು ಮತ್ತು ಮಲೆನಾಡು ಗೆಳೆಯರ ಬಳಗದವರು ಅಯೋಜಿಸಲಾಗಿರುವ ಹಳ್ಳಿಮಕ್ಕಳ ರಂಗಹಬ್ಬದ 15 ದಿನದ ಶಿಬರವನ್ನು ಉದ್ಘಾಟಸಿ ಮಾತನಾಡಿ, ರಂಗಕಲೆ ಕನ್ನಡಿಗರ ಜೀವ ತುಂಬಿದೆ ನಟನೆ ಸಂಗೀತ ದೃಶ್ಯ ವೈಭವದ ಪರಂಪರೆ ಬೆಳೆದುಬಂದಿದೆ ಮಕ್ಕಳಲ್ಲಿರುವ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸಲು ರಂಗಹಬ್ಬಗಳು ಉತ್ತಮ ವೇದಿಕೆಯಾಗಲಿ ಎಂದರು.

ವಿನಾಯಕ ವೃತ್ತದಲ್ಲಿ ರಂಗಜಾಥಾಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಚಾಲನೆ ನೀಡಿ, ಸಂಗೀತ ನಾಟಕ ಯಕ್ಷಗಾನ ಇನ್ನಿತರ ಕಲೆಗಳನ್ನು ಕಲಿಸಲು ಅಗಾಗ ನಮ್ಮೂರಿನಲ್ಲಿ ಇಂತಹ ಶಿಬಿರಗಳ ಅಗತ್ಯತ್ಯ ಇದ್ದು ಈ ಸೌಲಭ್ಯದ ಸದುಪಯೋಗವನ್ನು ಪಡದುಕೊಳ್ಳಲು ಪೋಸಕವರ್ಗ ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಪ್ರಗತಿಪರ ಕೃಷಿಕರಾದ ಹಾಲಸ್ವಾಮಿಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ಕರ್ನಾಟಕ ಪ್ರಾಂತೀಯ ಹಿಂದು ಸೇನೆಯ ಎಂ.ಬಿ.ಮಂಜುನಾಥ ರಂಗನಿರ್ದೇಶಕ ಡಾ.ಗಣೇಶ್ ಅರ್.ಕೆಂಚನಾಲ, ಅಶ್ವಿನಿ,ವೇದಾವತಿ, ಪದ್ಮಾಸುರೇಶ್, ದೀಪಾ, ಸಾರಾಭಿ, ಲಕ್ಷ್ಮಮ್ಮ, ನಾಗಾರ್ಜುನಸ್ವಾಮಿ, ಶೈಲಾ ಪ್ರಭು, ಆರ್.ಡಿ.ಶೀಲಾ, ಶಿವಾನಂದ ಸೊರಬ, ಆರ್.ಟಿ.ಗೋಪಾಲ, ಆಸಿಫ್, ಆರ್.ರಾಘವೇಂದ್ರ ಇನ್ನಿತರರು ಭಾಗವಹಿಸುವರು.

ಪ್ರಣತಿ ಪ್ರಾರ್ಥಿಸಿದರು. ಶ್ರೀಧರ ಸ್ವಾಗತಿಸಿದರು. ರಂಗತರಬೇತಿಗಾರ ಗಣೇಶ್ ಕೆಂಚನಾಲ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here