ಮಕ್ಕಳಲ್ಲಿ ಶಿಸ್ತು ಸಂಯಮ ಬರಬೇಕಾದರೆ ಸ್ಕೌಟ್ ಅಂಡ್ ಗೈಡ್ಸ್’ಗೆ ಸೇರಿಸಿ: ತಹಶೀಲ್ದಾರ್ ವಿ.ಎಸ್. ರಾಜೀವ್

0
599

ಹೊಸನಗರ: ದೇಶ ಭಕ್ತಿ ದೇಶವನ್ನು ಸುಭದ್ರ ಸ್ಥಿತಿಗೆ ತೆಗೆದುಕೊಂಡು ಹೋಗುವ ಮನಸ್ಥಿತಿ ಸೌಟ್ಸ್ ಮತ್ತು ಗೈಡ್ಸ್ ನಲ್ಲಿ ಮಾತ್ರ ಸಿಗಲಿದ್ದು ಎಂತಹ ಮಕ್ಕಳಲ್ಲಿ ಬೇಕಾದರೂ ಶಿಸ್ತು ಸಂಯಮಗಳು ಸಿಗಬೇಕಾದರೆ ಸ್ಕೌಟ್ಸ್ ಅಂಡ್ ಗೈಡ್ಸ್ ಗೆ ಸೇರಿಸಬೇಕೆಂದು ಹೊಸನಗರದ ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಹೇಳಿದರು.

ತಾಲ್ಲೂಕು ಕಛೇರಿಯ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ವಂದನೆ ಕಾರ್ಯಕ್ರಮವನ್ನು ನೇರವೇರಿಸಿ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ದೇಶ ಇಂದಿಗೂ ವಿಶ್ವದ ಗಮನ ಸೆಳೆಯುತ್ತಿರುವುದು ಇಲ್ಲಿನ ಸಂಸ್ಕೃತಿ ಇಲ್ಲಿನ ಶಿಸ್ತು ಸಂಯಮದ ವರ್ತನೆಗಳಿಂದ ವಿಶ್ವದ ಗಮನ ಸೆಳೆದಿದೆ ಇಡೀ ದೇಶದಲ್ಲಿಯೇ ಎಲ್ಲ ಶಾಲೆಗಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಶಾಖೆಗಳಿವೆ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಿಂದಲೇ ಶಿಸ್ತು ಸಂಯಮ ಕಲಿಸಿಕೊಡುವುದೆಂದರೆ ಈ ಶಾಖೆಯಾಗಿದೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಪಥ ಸಂಚಲನಕ್ಕೆ ಬಂದರೆ ಈ ದೇಶದ ಶಿಸ್ತು ಅವರ ಸಮವಸ್ತ್ರದಲ್ಲಿ ಕಾಣ ಬಹುದು ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರಿಸಿ ಈ ದೇಶದ ಶಿಸ್ತಿನ ಸಿಪಾಯಿಗಳನ್ನಾಗಿ ಮಾಡಬೇಕೆಂದು ಕರೆ ನೀಡಿದರು.

ಪಥ ಸಂಚಾಲನದ ನಂತರ ಹೋಲಿ ರೆಡೀಮರ್ ಶಾಲೆಯ ಆವರಣದಲ್ಲಿ ಜಿಲ್ಲಾ ಪುರಸ್ಕಾರ ಪರೀಕ್ಷಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೆಡಿಮರ್ ಶಾಲೆಯ ಪ್ರಾಂಶುಪಾಲರಾದ ಐರಿನ್ ಡಿಸಿಲ್ವಾರವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕ್ಷೇತ್ರಾ ಶಿಕ್ಷಣಾಧಿಕಾರಿ ವೀರಭದ್ರಪ್ಪ, ತಾಲ್ಲೂಕು ಕಾರ್ಯನಿರ್ವಹಣಾದಿಕಾರಿ ಪ್ರವೀಣ್, ಸ್ಕೌಡ್ಸ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ನಿಕ್ಸನ್ ಗೋನ್ಸಾಲೀಸ್, ಅಕ್ಷರ ದಾಸೋಹ ಸಂಯೋಜನಾದಿಕಾರಿ ಹಾಗೂ ನಾಗರಾಜ್, ಚಂದ್ರಬಾಬು, ಶಿವಶಂಕರ್, ಕಾತ್ಯಾಯಿತಿ, ಜ್ಯೋತಿ, ಸುರೇಶ್, ಮಮತ, ಸರಳ, ಅಂಜಲಿ ಅಶ್ವಿನ್‌ಕುಮಾರ್, ಜಯಲಕ್ಷ್ಮೀ, ರಾಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here