ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ; ಆರೋಪಿಗೆ 2 ವರ್ಷ ಶಿಕ್ಷೆ !

0
497

ಶಿವಮೊಗ್ಗ: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣದ ಬಗ್ಗೆ ಸಿಇಎನ್ ಪೊಲೀಸ್ ಇನ್ಸ್ ಸ್ಪೆಕ್ಟರ್ ಗುರುರಾಜ್ ಅವರು ಸ್ವಯಂ ಪ್ರೇರಿತರಾಗಿ ದೂರು ತನಿಖೆಯಲ್ಲಿ ತಪ್ಪಿತಸ್ಥ ಆರೋಪಿಯಾಗಿದ್ದ ದುಮ್ಮಳ್ಳಿ ರಘುಗೆ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗೂ ಒಂದು ಲಕ್ಷ ದಂಡ ವಿಧಿಸಿದೆ.

ಘಟನಾ ವಿವರ:

ದಿನಾಂಕಃ-06-05-2020 ರಂದು ಆರೋಪಿತನಾದ ರಘು. ಡಿ, 25 ವರ್ಷ, ದುಮ್ಮಳ್ಳಿ, ಶಿವಮೊಗ್ಗ ಈತನು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಬಗ್ಗೆ ಸಿಐಡಿ ಘಟಕದ ಸೈಬರ್ ಟಿಪ್ ಲೈನ್ ನಿಂದ ಮಾಹಿತಿ ನೀಡಿದ ಮೇರೆಗೆ ಸ್ವಯಂ ಪ್ರೇರಿತವಾಗಿ ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗದಲ್ಲಿ ಗುನ್ನೆ ಸಂಖ್ಯೆ 0056/2020 ಕಲಂ 67(B) IT Act -2000 ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ತನಿಖಾಧಿಕಾರಿಗಳಾದ ಗುರುರಾಜ್ ಕೆ.ಟಿ. ಪಿ.ಐ ಸಿಇಎನ್ ಪೊಲೀಸ್ ಠಾಣೆರವರು ಪ್ರಕರಣದ ತನಿಖೆಯ ಸಮಯದಲ್ಲಿ ಕಲಂ 12 POCSO ಮತ್ತು 354(A) IPC ಕಾಯ್ದೆಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ತನಿಖೆ ಪೂರೈಸಿ ಆರೋಪಿತನ ವಿರುದ್ಧ ದಿನಾಂಕಃ- 24/12/2020 ರಂದು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಹರಿಪ್ರಸಾದ್, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ದಯಾನಂದ್ ವಿ.ಹೆಚ್ ರವರು ದಿ:22-04-2022 ರಂದು ಆರೋಪಿತನಾದ ರಘು. ಡಿ, 25 ವರ್ಷ, ದುಮ್ಮಳ್ಳಿ, ಶಿವಮೊಗ್ಗ ಈತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ 02 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,00,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 06 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

ಜಾಹಿರಾತು

LEAVE A REPLY

Please enter your comment!
Please enter your name here