ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿ, ಜನಪ್ರತಿನಿಧಿಗಳನ್ನು ಎಚ್ಚರಿಸಿದ ಮಕ್ಕಳು | ಬಿಸಿಯೂಟಕ್ಕೆ ಕೊಠಡಿ ಸಮಸ್ಯೆ, ಶಾಲೆಗೆ ಹೋಗಲು ರಸ್ತೆ ಇಲ್ಲ, ಪಠ್ಯಪುಸ್ತಕ ಇನ್ನೂ ಬಂದಿಲ್ಲ !

0
533

ರಿಪ್ಪನ್‌ಪೇಟೆ: ಶಾಲೆ ಆರಂಭವಾಗಿ ಒಂದೂವರೆ ತಿಂಗಳು ಕಳೆದರು ಪಠ್ಯ ಪುಸ್ತಕ ಬಂದಿಲ್ಲ. ಬಿಸಿಯೂಟದ ಸಿಬ್ಬಂದಿಗಳ ಕೊರತೆ, ಶಾಲಾ ಕೊಠಡಿಗಳಿಲ್ಲದೆ ಇರುವುದು ಹಾಗೂ ರಾಮಕೃಷ್ಣ ಖಾಸಗಿ ವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಇನ್ನೂ ಸರ್ಕಾರಿ ಪ್ರೌಢಶಾಲೆಯಲ್ಲಿ ಕಿಟಕಿ, ಬಾಗಿಲುಗಳಿಲ್ಲ ಎಂದು ಹೀಗೆ ಸಮಸ್ಯೆಗಳ ಸುರಿಮಳೆಯನ್ನೇ ಮಕ್ಕಳ ಗ್ರಾಮ ಸಭೆಯಲ್ಲಿ ಎಳೆ-ಎಳೆಯಾಗಿ ಬಿಡಿಸಿಟ್ಟರು.

ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮತ್ತು ಕ್ಷೇತ್ರದ ಶಾಸಕರ ಗಮನ ಸೆಳೆಯುವುದಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಮೃತೇಶ್ ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಜಂಕ್‌ಪುಡ್ ಸೇವನೆಯಿಂದಾಗಿ ಮಕ್ಕಳ ಆರೋಗ್ಯದಲ್ಲಿ ಸಾಕಷ್ಟ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪೋಷಕ ವರ್ಗ ಮಕ್ಕಳಿಗೆ ಇಂತಹ ಆಹಾರ ಸೇವನೆಯಿಂದ ದೂರವಿರುವಂತೆ ಸಲಹೆ ನೀಡಬೇಕು ಮತ್ತು ತಂಪುಪಾನೀಯಗಳ ಸೇವನೆಯಿಂದಾಗಿ ಹಲ್ಲಿನ ತೊಂದರೆ ಹಾಗೂ ಸ್ವಚ್ಛ ಪರಿಸರ ರಕ್ಷಣೆಯಿಂದ ಉತ್ತಮ ಆರೋಗ್ಯವನ್ನು ಕಾಣಬಹುದೆಂದು ಹೇಳಿದರು.

ಪೊಲೀಸ್ ಠಾಣೆಯ ಎಎಸ್‌ಐ ಗಣಪತಿ ಮಾತನಾಡಿ, ಮಕ್ಕಳು ದುಶ್ಚಟಕ್ಕೆ ಮಾರುಹೋಗುತ್ತಿದ್ದು ಇದರಿಂದ ಮುಕ್ತರಾಗಿ ವಿದ್ಯಾಭ್ಯಾಸದ ಕಡೆ ಹೆಚ್ಚು ಆಸಕ್ತರಾಗಬೇಕು ಹಾಗೂ ಅಪ್ರಾಪ್ತ ವಯಸ್ಸಿನಲ್ಲಿಯೇ ಲೈಗಿಂಕ ದೌಜನ್ಯಗಳಿಗೆ ಬಲಿಯಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿ, ಅಂತಹವರನ್ನು ಆರಂಭಿಕ ಹಂತದಲ್ಲಿಯೇ ಧೈರ್ಯದಿಂದ ಎದುರಿಸಿ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ವಿವರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮಾಧ್ಯಕ್ಷೆ ಮಂಜುಳಾ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಗ್ರಾ.ಪಂ.ಸದಸ್ಯರಾದ .ಸುಂದರೇಶ್, ಡಿ.ಈ.ಮಧುಸೂಧನ, ಧನಲಕ್ಷ್ಮೀ, ವಿನೋಧ, ಸಾರಾಬಿ, ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ, ಅಂಗನವಾಡಿ, ಆರೋಗ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗ ಹಾಜರಿದ್ದರು.

ಪಿಡಿಓ ಜಿ.ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here