ಹೊಸನಗರ : ಶಾಲೆಗಳು ಆರಂಭವಾಗಿ 20 ದಿನಗಳಾದರೂ ಪಠ್ಯಪುಸ್ತಕಗಳು ಇನ್ನು ಮಕ್ಕಳ ಕೈಗೆ ಸಿಗದೆ ಪಠ್ಯ ಚಟುವಟಿಕೆಗಳು ಇಲ್ಲದೆ ಶಾಲೆಯಲ್ಲಿ ವೃತಾ ಕಾಲಕಳೆಯುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದ ಬಗ್ಗೆ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಪಠ್ಯಪುಸ್ತಕಗಳು ಮುದ್ರಣಗೊಂಡು ಅಲ್ಲಿಂದ ಶಿಕ್ಷಣಾಧಿಕಾರಿಗಳ ಗೋದಾಮಿಗೆ ಬಂದು ನಂತರ ತಾಲೂಕಿನ ಮೂಲೆಯ ಶಾಲೆಗಳಿಗೆ ತಲುಪಿ ಮಕ್ಕಳ ಕೈಗೆ ತಲುಪಿಸುವುದು ಸಾಹಸದ ಕೆಲಸವಾಗಿದೆ.
ಪ್ರತಿ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲದಕ್ಕೂ ಸಿದ್ಧರಿದ್ದು ಮಕ್ಕಳ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸರ್ಕಾರ ಎಡವುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕಗಳ ಸಮಸ್ಯೆಯೊಂದಿಗೆ ಶಾಲಾ ಕೊಠಡಿಗಳ ಹಾಗೂ ಶಿಕ್ಷಕರ ಕೊರತೆ ಸಮಸ್ಯೆ ಸಹ ಎದುರಾಗಿದೆ.
