ಮಣಿಕಂಠ ಎಸ್.ಎಂ ಕುಲಾಲ್‌ರವರಿಗೆ ಬಾಲಪ್ರತಿಭೆ ಅಂಡ್ ಯಂಗ್ ಪ್ರೋಡಿಜಿ ಪ್ರಶಸ್ತಿ ; ಅಭಿನಂದನೆ

0
317

ಹೊಸನಗರ: ಸಣ್ಣ ವಯಸ್ಸಿನಲ್ಲಯೇ ಯಾರಿಗೂ ಕಡಿಮೆಯಿಲ್ಲ ಎಂಬುದನ್ನು ಹಳ್ಳಿ ಶಾಲೆಯ ವಿದ್ಯಾರ್ಥಿ ಮಣಿಕಂಠ ಎಸ್.ಎಂ ಕುಲಾಲ್‌ರವರು ತೋರಿಸಿಕೊಟ್ಟಿದ್ದು ಇತ ಸಣ್ಣ ವಯಸ್ಸಿನಲ್ಲಿಯೇ ಭಾಷಣ ಮಾಡುವುದು, ಹಾಡು ಹೇಳುವುದು, ಯಕ್ಷಗಾನ, ಹರಿಕಥೆ ಮಾಡುವುದು, ಆರ್ಟ್ ಅಂಡ್ ಕ್ರಾಫ್ಟ್ ಮಾಡುವುದು, ಏಕಪಾತ್ರಾಭಿನಯ ಮಾಡುವುದರಲ್ಲಿ ತಾಲ್ಲೂಕಿಗೆ ಹೆಸರು ಮಾಡಿದ್ದು ಈತ ನಗರದ ಅಮೃತ ವಿದ್ಯಾಲಯಂನಲ್ಲಿ 6ನೇ ತರಗತಿ ಓದುತ್ತಿದ್ದು ಈತನ ಪ್ರತಿಭೆ ಕಂಡು ಬೆಂಗಳೂರು ಕಲಾದರ್ಪಣ ಆರ್ಟ್ರಿಪ್ಲೇಕ್ಷ್ ಅಕಾಡಮಿಯವರು ಬಾಲಪ್ರತಿಭೆ ಅಂಡ್ ಯಂಗ್ ಪ್ರೋಡಿಜಿ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರು ಮೂಲತಃ ಹೊಸನಗರ ತಾಲ್ಲೂಕು ಮಳಲಿ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿದ್ದು ಇವರ ತಂದೆ ಸುಧಾಕರ್, ತಾಯಿ ಅನಿತಾ ಕುಲಾಲ್‌ರವರ ದಂಪತಿಯ ಪುತ್ರರಾಗಿರುತ್ತಾರೆ.

ಅಭಿನಂದನೆ:

ಈ ವಿದ್ಯಾರ್ಥಿ ಸಣ್ಣ ವಯಸ್ಸಿನಲ್ಲಿಯೇ ಅಸಮಾನ್ಯ ಕಲಾಕರನಾಗಿದ್ದು ಇತನ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಯವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಈತ ಹೊಸನಗರ ತಾಲ್ಲೂಕಿಗೆ ಗೌರವ ತಂದಿದ್ದು ಈತನನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೇ ರಾಜ್ಯ-ರಾಷ್ಟ್ರಕ್ಕೆ ಗೌರವ ತರುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ. ಇಲಿಯಾಸ್‌ರವರು ಹೇಳಿದ್ದು ಇತನ ಪ್ರತಿಭೆ ಗುರುತಿಸಿ ಹಿರಿಯ ಕಲಾವಿದರು ಬೆಳೆಸಬೇಕಾಗಿದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here