23.2 C
Shimoga
Sunday, November 27, 2022

ಮದುವೆಗೆ ಬಂದವನು ಮಸಣಕ್ಕೆ ; ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು !!

ಸಾಗರ : ತಾಲೂಕಿನ ಆನಂದಪುರ ಸಮೀಪದ ಗಿಳಾಲಗುಂಡಿಯ ಬಳಿ ಇರುವ ಅಮ್ಮನ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಕೆರೆಯ ಮೆಟ್ಟಿಲ ಮೇಲೆ ಸ್ನಾನ ಮಾಡುತ್ತಿದ್ದಾಗ ನೀರಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.


ಚಿಕ್ಕಮಗಳೂರು ಮೂಲದ ಅಮೀನ್ (19) ಮೃತನಾದವನು. ಕಳೆದ ಒಂದು ವಾರದ ಹಿಂದಷ್ಟೆ ಸಂಬಂಧಿಕರ ಮದುವೆಗೆ ಎಂದು ಯುವಕ ತನ್ನ ಕುಟುಂಬಸ್ಥರ ಜೊತೆಗೆ ಬಂದಿದ್ದ ಬಟ್ಟೆ ತೊಳೆಯುವ ಸಲುವಾಗಿ ಕೆರೆಯ ಬಳಿ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.


ಯುವಕ ಕಾಲುಜಾರಿ ನೀರಿಗೆ ಬಿದ್ದಿದ್ದನ್ನು ಕಂಡು ಆತನ ಸಹಾಯಕ್ಕೆ ಬರುವಷ್ಟರಲ್ಲಿ ಮುಳುಗಿದ್ದ ವಿಷಯ ತಿಳಿದು ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದಾರೆ. ಅಷ್ಟರಲ್ಲಿ ಅಮೀನ್ ಸಾವನ್ನಪ್ಪಿದ್ದ. 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅಮೀನ್ ಮೃತದೇಹ ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!