ಮಧು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ‌ ಬಂದಿದೆ: ತಾಪಂ ಸದಸ್ಯ ಚಂದ್ರಮೌಳಿಗೌಡ

0
537

ಹೊಸನಗರ: ಕಾಂಗ್ರೆಸ್ ಪಕ್ಷಕ್ಕೆ ಸೊರಬ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಮಧು ಬಂಗಾರಪ್ಪ ನವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಆನೇಕ ತಾಲ್ಲೂಕುಗಳಿಗೆ ಆನೆಬಲ ಬಂದಿದೆ ಎಂದು ಹೊಸನಗರ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿಗೌಡ ಅವರು ಹೇಳಿದರು.

ಅವರು ಇಂದು ಪಟ್ಟಣದ ಗಾಂಧಿಮಂದಿರ (ಕಾಂಗ್ರೆಸ್ ಕಚೇರಿ) ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದಿನ ಮುಖ್ಯಮಂತ್ರಿ ದಿ. ಬಂಗಾರಪ್ಪನವರು ಇಡೀ ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಭಾವಿ ನಾಯಕರಾಗಿ ಜನ ಸೇವೆ ಮಾಡಿದವರು. ಇಡೀ ಕರ್ನಾಟಕದಲ್ಲಿಯೇ ಬಂಗಾರಪ್ಪನವರ ಪ್ರಭಾವ ಇಂದಿಗೂ ಇರುವುದರಿಂದ ಹಾಗೂ ಅವರು ಮುಖ್ಯಮಂತ್ರಿಯಾದ ಕಾಲದಲ್ಲಿ ರಾಜ್ಯದ ಬಡ ಜನರಿಗೆ ಅನೇಕ ಸವಲತ್ತುಗಳನ್ನು ನೀಡುವುದರ ಮೂಲಕ ಜನರ ಮನಸ್ಸಿನಲ್ಲಿ ಇನ್ನೂ ಉಳಿದಿದ್ದಾರೆ. ಇಂತಹ ಮಹಾನ್ ನಾಯಕರ ಮಗನಾಗಿ ಹುಟ್ಟಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಜೆಡಿಎಸ್ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಈಗ ಜೆಡಿಎಸ್ ಪಕ್ಷವನ್ನು ತೊರೆದು ನಮ್ಮ ಪಕ್ಷಕ್ಕೆ ಬರುತ್ತಿರುವುದಕ್ಕೆ ಭವ್ಯ ಸ್ವಾಗತ ಎಂದರು.

ಇವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಗೆ ಒಬ್ಬ ಉತ್ತಮ ನಾಯಕ ಸಿಕ್ಕಿದ್ದಾಂತಾಗುತ್ತದೆ ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ ಇವರ ಜನಾಂಗದವರು, ಕುಟುಂಬ ವರ್ಗದವರು ಹಾಗೂ ಬಂಗಾರಪ್ಪನವರ ಅಭಿಮಾನಿಗಳ ಬಳಗ ಹಾಗೂ ಈಡಿಗ ಜನಾಂಗ ಹೆಚ್ಚು ಜನ ಸಂಖ್ಯೆಯಲ್ಲಿ ಇರುವುದರಿಂದ ಈಡಿಗ ಜನಾಂಗದವರಿಗೆ ಒಬ್ಬ ಉತ್ತಮ ನಾಯಕ ಸಿಕ್ಕಿದಂತಾಗಿದ್ದು ಹಾಗೂ ಮುಂದಿನ ದಿನದಲ್ಲಿ ನಮ್ಮ ಪಕ್ಷದಲ್ಲಿ ಇವರಿಗೆ ಒಂದು ಸ್ಥರವಾದ ನೆಲೆ ಸಿಕ್ಕಿದಂತಾಗಿದ್ದು ಮುಂದಿನ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಲಿದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here