ಮನುಷ್ಯರ ಜ್ಞಾನ ಭಂಡಾರವೇ ಗ್ರಂಥಾಲಯಗಳು: ಸುಚೀತಾ ಓಂಕೇಶ್

0
560

ಹೊಸನಗರ: ಬುದ್ಧಿವಂತ ಜ್ಞಾನವಂತನಾಗಬೇಕಾದರೆ ಪುಸ್ತಕಗಳನ್ನು ಓದುವುದರಿಂದ ಮನುಷ್ಯರ ಜ್ಞಾನ ಅಭಿವೃದ್ಧಿಯಾಗುತ್ತದೆ ಮನುಷ್ಯರ ಜ್ಞಾನ ಭಂಡಾರವೇ ಗ್ರಂಥಾಲಯಗಳು ಎಂದು ಜಿಲ್ಲಾ ಗ್ರಂಥಾಲಯದ ಪ್ರಾಧಿಕಾರದ ಸದಸ್ಯೆ ಸುಚೀತಾ ಓಂಕೇಶ್‌ರವರು ಹೇಳಿದರು.

ಹೊಸನಗರದ ಬಸ್ಸ್ ಸ್ಟ್ಯಾಂಡ್ ಸಮೀಪದಲ್ಲಿರುವ ತಾಲ್ಲೂಕು ಕೇಂದ್ರ ಗ್ರಂಥಾಲಯದಲ್ಲಿ ನವೆಂಬರ್ 14ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳ ಬೇಕಾದರೆ ಪುಸ್ತಕಗಳನ್ನು ಓದಬೇಕು ಅದರಲ್ಲಿರುದ ಸದ್ಗುಣಗಳನ್ನು ಆಳವಡಿಸಿಕೊಂಡರೆ ಮನುಷ್ಯ ಮನುಷ್ಯರಾಗಿ ಈ ಸಮಾಜದಲ್ಲಿ ಬದುಕಲು ಸಾಧ್ಯ ಮನವರ ಜ್ಞಾನ ಭಂಡಾರವೇ ಗ್ರಂಥಾಲಯಗಳು ಇಲ್ಲಿ ಎಲ್ಲ ರೀತಿಯ ಪುಸ್ತಕಗಳು ಎಲ್ಲ ಜ್ಞಾನಿಗಳ ಪುಸ್ತಕಗಳು ಓದಲು ಸಿಗುತ್ತದೆ ಇದರಿಂದ ಜ್ಞಾನ ಅಭಿವೃದ್ಧಿಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಗ್ರಂಥಾಲಯಕ್ಕೆ ಬಂದು ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಂಡು ಈ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದರು.

ಜ್ಞಾನಾಭಿವೃದ್ಧಿಯಾಗಲೂ ಪುಸ್ತಕಗಳ ಪಾತ್ರ ಬಹಳ ಮುಖ್ಯ – ಮಾರ್ಷಲ್ ಶಾರಂ

ಇಂದಿನ ಯುಗದಲ್ಲಿ ಡಿಜಿಟಲ್ ಯುಗವಾಗಿರುವುದರಿಂದ ಎಲ್ಲರೂ ಮೊಬೈಲ್ ಮೊರೆ ಹೋಗಿದ್ದಾರೆ ಶಾಲೆಯ ಪುಸ್ತಕಗಳನ್ನು ಬಿಟ್ಟರೆ ಬೇರೆ ಪುಸ್ತಕದ ಕಡೆ ಇಂದಿನ ಯುವ ಪೀಳಿಗೆಯವರು ಗಮನ ಹರಿಸುತ್ತಿಲ್ಲ ಇದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ ಪ್ರಾಂಶುಪಾಲರಾದ ಮಾರ್ಷಲ್ ಶರಾಂರವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಎಲ್.ಕೆ.ಜಿ, ಯು.ಕೆ.ಜಿಯಿಂದಲ್ಲೇ ಮಕ್ಕಳ ಕೈಯಲ್ಲಿ ಪೋಷಕರು ಮೊಬೈಲ್ ಕೊಡುತ್ತಿದ್ದಾರೆ ಇದು ಮುಂದೆ ಪೋಷಕರಿಗೆ ಅಪಾಯಕಾರಿಯಾಗಲಿದೆ. ಮೊಬೈಲ್ ಬದಲು ಸಣ್ಣ-ಸಣ್ಣ ಕತೆಗಳ ಪುಸ್ತಕಗಳನ್ನು ನೀಡಿ ವಿದ್ಯಾಭ್ಯಾಸ ಮಾಡಿದರೆ ಆ ಮಕ್ಕಳು ಮುಂದೆ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳುತ್ತಾರೆ ಅದನ್ನು ಬಿಟ್ಟಿ ಮೊಬೈಲ್‌ಗಳನ್ನು ನೀಡಿದರೆ ಆ ಮಕ್ಕಳು ಓದಿನ ಕಡೆ ಗಮನ ಹರಿಸುವುದಿಲ್ಲ ಓದು ಪ್ರತಿಯೊಬ್ಬರ ಜೀವನಕ್ಕೂ ಬಹಳ ಮುಖ್ಯ ಓದು ಇಲ್ಲದಿದ್ದರೇ ಈ ಸಮಾಜದಲ್ಲಿ ಅನಕ್ಷರಸ್ಥರಾಗಿ ಬದುಕಲು ಸಾಧ್ಯವಿಲ್ಲ ಪ್ರತಿಯೊಬ್ಬರು ಓದಿನ ಕಡೆಗೆ ಹೆಚ್ಚಿನ ಸಮಯವನ್ನು ಮೀಸಲಿಡಿ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಾಪಾಲಕರಾದ ಅಶೋಕ್ ಗುಳೆದ್, ಆಹಾರ ಇಲಾಖೆಯ ಆಹಾರಾಧಿಕಾರಿ ನಾಗರಾಜ್, ಓದುಗಾರರಾದ ನಾಗರಾಜ್, ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಕೆ.ಜಿ.ನಾಗೇಶ್, ಗ್ರಂಥಾಲಯದ ನೌಕರರಾದ ಪ್ರೇಮಲತಾ, ರೂಪದೇವಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here